February 2, 2026

KMJ SYS SSF KCF ಬಾರೆಬೆಟ್ಟು ವತಿಯಿಂಂದ 79ನೇ ಸ್ವಾತಂತ್ರ  ದಿನ  ಆಚರಣೆ ಯ ಪ್ರಯುಕ್ತ ತಾಳಿತ್ತನೂಜಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತ 2 ಕಂಪ್ಯೂಟರ್ ವಿತರಣೆ :

0
image_editor_output_image1145412178-1755359875531

ವಿಟ್ಲ ಕೂಳ್ನಾಡು ಗ್ರಾಮದ ಬಾರೆಬೆಟ್ಟು ಜಂಕ್ಷಣ್ ನಲ್ಲಿ ಎಲ್ಲಾ ವರ್ಷವೂ ಆಚರಿಸಿಕೊಂಡು ಬರುವ ಹಾಗೆ 79ನೇ ಸ್ವಾತಂತ್ರೊತ್ಸವವು ಬಹಳ ವಿಜ್ರಂಭನೆಯಿಂದ ಜರುಗಿತು

.KMJ ನಾಯಕರಾದ ಹಸೈನಾರ್ ಮುಸ್ಲಿಯಾರ್ ಮತ್ತು ಸ್ತಳೀಯ ಬಾರೆೆಬೆಟ್ಟು ಖತೀಬರಾದ ಅಬ್ದಲ್ ರಝಾಕ್ ಮದನಿ ದ್ವಜಾರೋಹಣ ಮತ್ತು ದುಆ ಕ್ಕೆ ನೇತ್ರತ್ವ ನೀಡಿದರು.

ಈ ಸಂದರ್ಬದಲ್ಲಿ ಸೇರಿದ ಗಣ್ಯರು ಮತ್ತು ಕಾರ್ಯಕರ್ತರೊಂದಿಗೆ ಸ್ವಾತಂತ್ರಕ್ಕೆ ಬೇಕಾಗಿ ಹೋರಾಡಿ ದವರ ಗುಣಗಾನ ಮಾಡಲಾಯಿತು ,

ಈ ಸಂದರ್ಬದಲ್ಲಿ ಲತೀಫ್ ಮದನಿ ಸದರ್ ಮುಹಲ್ಲಿಂ ,ರಫೀಕ್ ಝುಹ್ರಿ ಮುಹಲ್ಲಿಂ ಬಾರೆಬೆಟ್ಟು ಮತ್ತು SYS ನೇತಾರ ಶರೀಫ್ ಸಅದಿ ಬಾರೆಬೆಟ್ಚು ಮತ್ತು ಹಲವಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಬಾಗಿಯಾಗಿದ್ದರು .

ನಂತರ ದ ಕ ಜಿ ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದ್ವಜಾರೋಹಣ ಕಾರ್ಯಕ್ರಮದ ಬಳಿಕ ಬಾರೆಬೆಟ್ಟು   KMJ SYS SSF ನ ನೇತ್ರತ್ವದಲ್ಲಿ GCC BROTHERS BAREBETTU ನೀಡಿದ 2 ಕಂಪ್ಯೂಟರ್ಗಳನ್ನು ತಾಳಿತ್ತನೂಜಿ ಶಾಲೆಯ ಶಾಲಾಭಿವ್ರದ್ದಿ ಸಮಿತಿ ,ಅದ್ಯಕ್ಷರ ಮತ್ತು ಶಿಕ್ಷಕರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು ,

ಈ ಕಾರ್ಯಕ್ರಮದಲ್ಲಿ SYS ರಾಜ್ಯ ಕೋಶಾದಿಕಾರಿ ಮನ್ಶೂರ್ ಅಲಿ ಕೋಟೆಗದ್ದೆ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು  SYS ರಾಜ್ಯ ನಾಯಕರಾದ ಇಬ್ರಾಹಿಂ ಖಲೀಲ್ ರವರು ಭಾಗವಹಿಸಿದ್ದರು ,KMJ ನಾಯಕರಾದ ಹಸೈನಾರ್ ಮುಸ್ಲಿಯಾರ್ , ಶಾಲಾಭಿವ್ರದ್ದಿ ಅದ್ಯಕ್ಷರಾದ ಅಬ್ದಲ್ ಖಾಲಿದ್ ,ಅವರು ಕಂಪ್ಯೂಟರ್ ಕೊಠಡಿ ಉದ್ಘಾಟನೆ ಮಾಡಿ ಚಾಲನೆ ನೀಡಿದರು,

ಈ ಸಂದರ್ಭದಲ್ಲಿ  ಮಾಜಿ ಪಂಚಾಯತ್ ಸದಸ್ಯರಾದ ಯೂಸುಫ್ ಟಿ ,  ಮಾಜಿ ಪಂಚಾಯತ್ ಸದಸ್ಯರಾದ ಗಂಗಾದರ ಚೌಟ , ನಾರಾಯಣ ಶೆಟ್ಟಿ ಕುಲ್ಯಾರ್ ,SSF ಕಾರ್ಯದರ್ಶಿ ಅನ್ಸಾರ್ ,ಶಾಲಾ ಅಭಿವ್ರದ್ದಿ ಸಮಿತಿಯ ಪಧಾದಿಕಾರಿಗಳು,  KMJ SYS SSF KCF ನ ನಾಯಕರು ಮತ್ತು ಕಾರ್ಯಕರ್ತರು  ಮತ್ತು ಸಾರ್ವಜನಿಕರು ಭಾಗವಹಿಸಿದ್ದರು , ಜೊತೆಗೆ ಕಂಪ್ಯೂಟರ್ ನ ವ್ಯವಸ್ತೆ ಮಾಡಿದಂತಹ GCC BROTHERS ಮತ್ತು ಸುನ್ನಿ ಸಂಘಟನೆಗಳ ಸೇವೆಯನ್ನು ಅಧ್ಯಕ್ಷರಾದ ಅಬ್ದಲ್ ಖಾಲಿದ್ ಮತ್ತು ಶಾಲಾ ಮುಖ್ಯ ಶಿಕ್ಷಕರು ಗಣ್ಯರಿಂದ ಶ್ಲಾಗಿಸಲಾಯಿತು , ಸ್ವಾತಂತ್ರ ದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಮೆರವಣಿಗೆ ಮತ್ತು ಇತರ ಕಲಾ ಚಟುವಟಿಕೆಗಳು ಬಹಳ ಚಂದವಾಗಿ ಮತ್ತು ಅಚ್ಚುಕಟ್ಚಾಗಿ ಮಾಡಲಾಗಿದ್ದವು ,ಕೊನೆಯಲ್ಲಿ ಸುನ್ನಿ ಸಂಘಟನೆಗಳ ವತಿಯಿಂದ ಸಿಹಿ ಹಂಚಲಾಯಿತು ,

Leave a Reply

Your email address will not be published. Required fields are marked *

error: Content is protected !!