March 21, 2026

ಬಂಟ್ವಾಳ: ಮೈಮೇಲೆ ಮರದ ಗೆಲ್ಲು ಬಿದ್ದು ಲಾರಿ ಚಾಲಕ ಮೃತ್ಯು

0
image_editor_output_image1463321321-1755160478359.jpg

ಬಂಟ್ವಾಳ: ಮೈಮೇಲೆ ಮರದ ಗೆಲ್ಲು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಲಾರಿ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಪೆರಾಜೆ ಗ್ರಾಮದ ಕುಡೋಲು ಜಗದೀಶ್ ಗೌಡ (50) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಇವರು ಮೂಡಬಿದಿರೆಯ ಫೀಡ್ ತಯಾರಿಕೆ ಮಾಡುವ ಖಾಸಗಿ ಕಂಪೆನಿಯೊಂದರಲ್ಲಿ ಲಾರಿ ಚಾಲಕ ವೃತ್ತಿಯನ್ನು ಮಾಡುತ್ತಿದ್ದು, ಕಂಪೆನಿಯಿಂದ ಫೀಡ್ ಲೋಡ್ ಮಾಡಿ ಕಾಸರಗೋಡು ಜಿಲ್ಲೆಗೆ ಹೋಗಿದ್ದರು.

ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ರಸ್ತೆಯಲ್ಲಿ ಅಡ್ಡಲಾಗಿ ಇದ್ದ ಮರದ ಗೆಲ್ಲನ್ನು ಬದಿಗೆ ಸರಿಸಲು ಲಾರಿಯಿಂದ ಕೆಳಗೆ ಇಳಿದಿದ್ದ ಸಂದರ್ಭದಲ್ಲಿ ಮತ್ತೊಂದು ಗೆಲ್ಲು ಇವರ ಮೈಮೇಲೆ ಬಿದ್ದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!