ಜೈನ ಧರ್ಮದ ಅವಹೇಳನಕ ಹೇಳಿಕೆ: ಗಿರೀಶ್ ಮಟ್ಟಣ್ಣನವರ್ ವಿರುದ್ಧ FIR ದಾಖಲು
ಹುಬ್ಬಳ್ಳಿ: ಧರ್ಮಸ್ಥಳ ವಿಚಾರ ಮಾತನಾಡುವ ಭರದಲ್ಲಿ ಜೈನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಹಾಗೂ ಅವರ ಹೇಳಿಕೆ ಪ್ರಸಾರ ಮಾಡಿರುವ Kudla Rampage ಯೂಟ್ಯೂಬ್ ಚಾನೆಲ್‌ನ ಮಾಲೀಕನ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜೈನ್ ಧರ್ಮೀಯರು ಕ್ರೂರಿಗಳು, ಸ್ತ್ರೀಲೋಲರು, ಮತಾಂಧರು ಸೇರಿದಂತೆ ಇತ್ಯಾದಿ ಪದಗಳನ್ನು ಜೈನರ ವಿರುದ್ಧ ಬಳಕೆ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ ಅದನ್ನು Kudla Rampage ಚಾನೆಲಿನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದರಿಂದಾಗಿ ಜೈನ ಸಮಾಜಕ್ಕೆ ನೋವಾಗಿದೆ ಎಂದು ಹುಬ್ಬಳ್ಳಿ ಜೈನ್ ಸಮಾಜದ ಮುಖಂಡ ಅಜಿತ್, ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.




