ಶಾಸಕರು ಆರೋಪಿಗಳ ರಕ್ಷಣೆಗೆ ಕಟ್ಟುಕಥೆ ಸೃಷ್ಟಿ ಮಾಡಿ ಪೊಲೀಸರ ಕರ್ತವ್ಯಕ್ಕೆ ಬೆದರಿಕೆ ಹಾಕಿರುವುದು ಖಂಡನೀಯ: ಅಕ್ಬರ್ ಬೆಳ್ತಂಗಡಿ
ಬೆಳ್ತಂಗಡಿ: ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ಉಜಿರೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಎಸ್‍ಡಿಪಿಐ ಪಕ್ಷದ ವಿರುದ್ಧ ಆರೋಪ ಮಾಡಿರುವುದನ್ನು ಬೆಳ್ತಂಗಡಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಯವರು ಖಂಡಿಸಿದ್ದಾರೆ.
ಧರ್ಮಸ್ಥಳ ವಿಷಯಕ್ಕೆ ಸಂಬಂಧಿಸಿ ಈಗಾಗಲೇ ಎಸ್.ಐ.ಟಿ. ತನಿಖೆ ಕೈಗೆತ್ತಿಕೊಂಡಿದೆ. ತನಿಖೆಯ ದಿಕ್ಕು ತಪ್ಪಿಸಲೆಂದೇ ಕೆಲವು ಕಿಡಿಗೇಡಿಗಳು ಧರ್ಮಸ್ಥಳದಲ್ಲಿ ಭಯಭೀತ ವಾತಾವರಣವನ್ನು ನಿರ್ಮಾಣ ಮಾಡಲು ಯತ್ನಿಸುತ್ತಿದ್ದು, ಇದರ ಭಾಗವಾಗಿ ಯೂಟ್ಯೂಬ್ ಪತ್ರಕರ್ತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಹಲ್ಲೆ ನಡೆಸಿದ ಗುಂಡಾಗಳ ಬಂಧನವನ್ನು ಮಾಡುತ್ತಿದ್ದು, ಗೂಂಡಾಗಳನ್ನು ರಕ್ಷಿಸುವ ಸಲುವಾಗಿ ಶಾಸಕರು ಬಾಲಿಶ ತನದ ಹೇಳಿಕೆಯನ್ನು ನೀಡಿದ್ದು ಪೊಲೀಸರು ಎಸ್‌ಡಿಪಿಐ ನಾಯಕರ ಮಾತುಗಳನ್ನು ಕೇಳಿ ಬಂಧನ ಮಾಡುತ್ತಿದ್ದಾರೆ ಎಂಬ ಕಟ್ಟುಕತೆಯನ್ನು ಕಟ್ಟಿದ್ದಾರೆ. ಕ್ಷೇತ್ರದ ಜನತೆಯು ಇದನ್ನು ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ನೀಡಲಿದ್ದಾರೆ.
ಎಸ್‌ಡಿಪಿಐ ಪಕ್ಷವು ಯಾವತ್ತಿಗೂ ನ್ಯಾಯದ ಪರವಾಗಿ ಹೋರಾಟ ನಡೆಸುತ್ತಿದ್ದು, ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸದೆ ಸುಖ ಸುಮ್ಮನೆ ಆರೋಪಗಳನ್ನು ಹೋರಿಸಿ, ಕೋಮು ದೃವೀಕರಣದ ಮೂಲಕ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಶಾಸಕರ ಹೇಳಿಕೆಯು ಸತ್ಯಕ್ಕೆ ದೂರವಾಗಿದ್ದು, ಪೊಲೀಸ್ ಇಲಾಖೆ ಧರ್ಮಸ್ಥಳದಲ್ಲಿ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧನ ಮಾಡಿ ನ್ಯಾಯ ಒದಗಿಸಿ ಕೊಡಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಅಕ್ಬರ್ ಬೆಳ್ತಂಗಡಿ ಆಗ್ರಹಿಸಿದ್ದಾರೆ.




