ಕಾವಳಕಟ್ಟೆ: ಯೆನಪೋಯ ದಂತ ಆರೋಗ್ಯ ಕೇಂದ್ರ ಉದ್ಘಾಟನೆ
ಬಂಟ್ವಾಳ: ಯೇನಪೋಯ ಡೆಂಟಲ್ ಕಾಲೇಜ್, ಯೇನಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಅಲುಮ್ನಿ ಎಸೋಸಿಯೇಶನ್ ಹಾಗೂ ಹಿದಾಯ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಕಾವಳಕಟ್ಟೆ ಸುತ್ತಮುತ್ತಲಿನ ಪರಿಸರದ ಸಮುದಾಯಕ್ಕೆ ಉಚಿತ ಮತ್ತು ಗುಣಮಟ್ಟದ ದಂತ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಪೆರಿಫೆರಲ್ ಡೆಂಟಲ್ ಹೆಲ್ತ್ ಕ್ಲಿನಿಕ್ ಗೆ ಹಿದಾಯ ಶೇರ್ ಮತ್ತು ಕೇರ್ ಕಾಲೋನಿಯಲ್ಲಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈ ನೆರವೇರಿಸಿದರು.

ಹಿದಾಯ ಫೌಂಡೇಶನ್ ಕೇಂದ್ರ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದರು. ಯೇನೆಪೋಯದ ಡಾ. ಲಕ್ಷ್ಮಿಕಾಂತ್ ಚಾತ್ರ, ಡಾ. ಅಕ್ತರ್ ಹುಸೈನ್, ಡಾ. ಶಾಮ್ ಎಸ್. ಭಟ್, ಜಿ.ಪಂ. ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಡಾ. ರೇಖಾ ಶೆಣೈ, ಡಾ. ರೂಬನ್, ಡಾ. ಮಹಮೂದ್, ಡಾ. ಇಮ್ರಾನ್ ಪಾಷಾ, ಹಿದಾಯ ಫೌಂಡೇಶನ್ ನ ಆಬಿದ್ ಅಸ್ಗರ್, ಕಾಸಿಂ ಅಹ್ಮದ್, ಅಖ್ತರ್ ಹುಸೈನ್, ಆಸಿಫ್ ಇಕ್ಬಾಲ್, ಕೆ.ಎಸ್.ಅಬೂಬಕರ್, ಹಂಝ ಬಸ್ತಿಕೋಡಿ, ಅಬ್ದುಲ್ಲ ಮಂಗಳೂರು, ಬಶೀರ್ ವಗ್ಗ, ಇಲ್ಯಾಸ್ ಕಕ್ಕಿಂಜೆ, ರಶೀದ್ ಕಕ್ಕಿಂಜೆ, ಬಿ. ಮೊಹಮ್ಮದ್ ತುಂಬೆ, ಇಬ್ರಾಹಿಂ ಖಲೀಲ್, ಆಶಿಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.
ಹಕೀಂ ಕಲಾಯಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಅನಂತಾಡಿ ನಿರೂಪಿಸಿದರು. ಡಾ. ಸೋನು ರಮಾದಾನ್ ವಂಧಿಸಿದರು.




