June 21, 2026

ಕಾಸರಗೋಡು: ಶರ್ಟ್ ಬಟನ್ ಹಾಕಿಲ್ಲ ಎಂದು ವಿದ್ಯಾರ್ಥಿ ಮೇಲೆ ರ್ಯಾಗಿಂಗ್, ಹಲ್ಲೆ: 10 ಮಂದಿ ವಿದ್ಯಾರ್ಥಿಗಳ ವಿರುದ್ಧ FIR ದಾಖಲು

0
image_editor_output_image322092905-1754559388844.jpg

ಕಾಸರಗೋಡು: ಮೇಲ್ಬಾಗದ ಬಟನ್ ಶರ್ಟಿನ ಸಮರ್ಪಕವಾಗಿ ಹಾಕಿಲ್ಲ ಎಂದು ಆರೋಪಿಸಿ ಪ್ಲಸ್ ವನ್ ವಿದ್ಯಾರ್ಥಿ ಮೇಲೆ ಪ್ಲಸ್ ಟು ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿದ ಆರೋಪವೊಂದು ಕೇಳಿ ಬಂದಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಮಡಿಕೈ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪ್ಲಸ್ ಟು ವಿದ್ಯಾರ್ಥಿಗಳ ತಂಡ ಕುತ್ತಿಗೆಗೆ ತುಳಿದ ಕಾರಣ ಪ್ಲಸ್ ವನ್ ವಿದ್ಯಾರ್ಥಿ ಸುಮಾರು 6 ಗಂಟೆಗಳ ಕಾಲ ಪ್ರಜ್ಞೆ ತಪ್ಪಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ 10 ಮಂದಿ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಕಾಂಞಂಗಾಡಿನ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಞಂಗಾಡ್‌ನ ಬಲ್ಲಾ ಕಡಪ್ಪುರಂ ನಿವಾಸಿ ಮಡಿಕೈ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ತರಗತಿಯ ವಿಜ್ಞಾನ ವಿದ್ಯಾರ್ಥಿ ಮುಹಮ್ಮದ್ ಶನೀದ್ (16) ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದಾನೆ. ಆಗಸ್ಟ್ 5 ರಂದು ಸಂಜೆ ಶಾಲೆಯಲ್ಲಿ ಈ ದಾಳಿ ನಡೆದಿದೆ.

ಆಗಸ್ಟ್ 5 ರಂದು ಅಪರಾಹ್ನ 3.30 ರ ವೇಳೆಗೆ ಮುಹಮ್ಮದ್ ಶನೀದ್ ತನ್ನ ಸ್ನೇಹಿತನ ಜತೆ ಶೌಚಾಲಯದ ಬಳಿ ನಿಂತಿದ್ದಾಗ ಶರ್ಟ್‌ನ ಕಾಲರ್ ಬಟನ್ ಸರಿಯಾಗಿ ಹಾಕಿಲ್ಲ ಎಂದು ಆರೋಪಿಸಿ ಸುಮಾರು 10 ರಿಂದ 15 ಮಂದಿ ಪ್ಲಸ್ ಟು ವಿದ್ಯಾರ್ಥಿಗಳು ಹಲ್ಲೆ ಮಾಡಿ ದೂಡಿ ಹಾಕಿ ಆತನ ಎದೆ, ಸೊಂಟ, ಕಾಲುಗಳು ಮತ್ತು ಕುತ್ತಿಗೆಗೆ ತುಳಿದಿದ್ದಾರೆ. ಇದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅತನನ್ನು ಓರ್ವ ಶಿಕ್ಷಕ ಸ್ಟಾಫ್ ರೂಮಿಗೆ ಕರೆದೊಯ್ದು, ಬಳಿಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!