ಧರ್ಮಸ್ಥಳ ಪ್ರಕರಣ: 9ನೇ ಸ್ಥಳದ ಉತ್ಖನನ ಕಾರ್ಯ ಮುಕ್ತಾಯ
ಧರ್ಮಸ್ಥಳದ ಸಾಮೂಹಿಕ ಸಮಾಧಿ ಆರೋಪ ಪ್ರಕರಣದ ತನಿಖೆಯ ಭಾಗವಾಗಿ, ವಿಶೇಷ ತನಿಖಾ ತಂಡ (SIT) ನೇತ್ರಾವತಿ ನದಿಯ ಸ್ನಾನ ಘಟ್ಟದ ಸಮೀಪದ ಸ್ಥಳಗಳಲ್ಲಿ ನಡೆಸುತ್ತಿರುವ ಉತ್ಖನನ ಕಾರ್ಯವು ತೀವ್ರ ಕುತೂಹಲವನ್ನು ಮೂಡಿಸಿದೆ.
ಇಂದು ಒಂಬತ್ತನೇ ಸ್ಥಳ (ಸ್ಪಾಟ್ 9)ದಲ್ಲಿ ಜರಿಗಿದ ಉತ್ಖನನ ಕಾರ್ಯ ಮುಕ್ತಾಯಗೊಂಡಿದೆ. ಈ 9 ರಿಂದ 13 ಪಾಯಿಂಟ್ಗಳು ಭಾರೀ ಕುತೂಹಲ ಮೂಡಿಸಿದೆ. ಯಾಕಂದರೆ ಅನಾಮಿಕ ದೂರುದಾರ ಈ ಪಾಯಿಂಟ್ಗಳ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮಿನಿ ಜೆಸಿಬಿಯನ್ನು ಬಳಸಲಾಗಿದ್ದು, ಸುಮಾರು 6 ಅಡಿ ಅಗೆಯಲಾಯ್ತು. ಮೊದಲಿಗೆ 3 ಅಡಿಯನ್ನು ಕಾರ್ಮಿಕರು ತೆಗೆದಿದ್ದು, ನಂತರ ಜೆಸಿಬಿಯನ್ನು ಬಳಸಿ ಕಾರ್ಯಾಚರಣೆ ನಡೆಸಲಾಯ್ತು.




