ಬಂಟ್ವಾಳ: ಬೈಕ್ ಗಳ ನಡುವೆ ಅಪಘಾತ: ಗಂಭೀರ ಗಾಯಗೊಂಡಿದ್ದ ಸಹಸವಾರ ಮೃತ್ಯು
ಬಂಟ್ವಾಳ: ಬಿ ಸಿ ರೋಡು- ವಿಲ್ಲುಪುರಂ ರಾಜ್ಯ ಹೆದ್ದಾರಿಯ ಪುಂಜಾಲಕಟ್ಟೆ ಎಂಬಲ್ಲಿ ಎರಡು ಬೈಕ್ ಗಳ ನಡುವೆ ನಡೆದ ಗಾಯಗೊಂಡ ಅಪಘಾತದಲ್ಲಿ ಗಂಭೀರವಾಗಿ ಸಹಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಪಿಲಾತಬೆಟ್ಟು ನಿವಾಸಿ ಜನಾರ್ಧನ ಮೂಲ್ಯ (51) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಶಿವರಾಜ್ ಎಂಬವರ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಪುಂಜಾಲಕಟ್ಟೆ ಆಸ್ಪತ್ರೆಯ ಮುಂಭಾಗದಲ್ಲಿ ಅಪಘಾತ ನಡೆದಿದೆ.
ಸತೀಶ್ ಎಂಬವರ ಬೈಕ್ ಹಾಗೂ ಶಿವರಾಜ್ ಎಂಬವರ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು ಇವರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪುಂಜಾಲಕಟ್ಟೆ ಎಸ್. ಐ.ರಾಜೇಶ್ ದಾಖಲಿಸಿಕೊಂಡಿದ್ದಾರೆ.




