March 13, 2026

ಸಕಲೇಶಪುರದಲ್ಲಿ ಬಸ್ ಗಳ ಓವರ್‌ ಟೇಕ್‌ ರಭಸದಲ್ಲಿ ಢಿಕ್ಕಿ

0
image_editor_output_image-1637597918-1753854367626.jpg

ವಿಟ್ಲದಿಂದ ಪುತ್ತೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಭಾರತ್ ಬಸ್‌ಗೆ ಸಕಲೇಶಪುರದಲ್ಲಿಎದುರಿನಿಂದ ಬರುತ್ತಿದ್ದ ಇನ್ನೊಂದು ಬಸ್ ಓವರ್‌ ಟೇಕ್‌ ಮಾಡುವ ರಭಸದಲ್ಲಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಘಟನೆ ಪರಿಣಾಮ ಭಾರತ್ ಬಸ್‌ನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ .

ಬಸ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಇದೇ ಬಸ್‌ನಲ್ಲಿ ವಿಟ್ಲದ ವೈನ್ ಸ್ಟೋರ್ ಮಾಲಕರೊಬ್ಬರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ನಿದ್ದೆ ಬರಲಿಲ್ಲವೆಂದು ಡ್ರೈವರ್‌ನ ಪಕ್ಕದ ಸೀಟ್‌ನಲ್ಲಿ ತುಂಬಾ ಹೊತ್ತು ಕುಳಿತ್ತಿದ್ದರು. ಘಟನೆ ನಡೆಯುವ ಒಂದು ನಿಮಿಷದ ಮೊದಲು ಇವರು ಮರಳಿ ತನ್ನ ಸೀಟ್‌ನಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!