March 13, 2026

ಧರ್ಮಸ್ಥಳ ಪ್ರಕರಣ: ಎಸ್ಐಟಿ, ಸಹಾಯಕ ಆಯುಕ್ತರ ನೇತೃತ್ವದಲ್ಲಿ 2ನೇ ದಿನವೂ ಮುಂದುವರಿದ ಅಗೆತ ಕಾರ್ಯ

0
image_editor_output_image122922624-1753852995521.jpg

ಧರ್ಮಸ್ಥಳ: ವ್ಯಕ್ತಿಯೊಬ್ಬರು ತಾನು ಹೂತಿದ್ದ ನೂರಾರು ಕಳೇಬರಗಳನ್ನು ತೆಗೆಯುತ್ತೇನೆಂದು ಹೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಶೇಷ ತನಿಖಾ ತಂಡ ಹಾಗೂ ಸಹಾಯಕ ಆಯುಕ್ತರ ಸಮ್ಮುಖದಲ್ಲಿ ಎರಡನೇ ದಿನ ಅಗೆತ ಕಾರ್ಯ ಮುಂದುವರೆದಿದೆ.

ಎಸ್‌ಐಟಿ ಅಧಿಕಾರಿ ಅನುಚೇತ್ ಸೇರಿದಂತೆ ಹಲವಾರು ಅಧಿಕಾರಿಗಳು ಸ್ಥಳದಲ್ಲಿ ನಿಂತು ಅಗೆತ ಕಾರ್ಯವನ್ನು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಧರ್ಮಸ್ಥಳದ ಅಸಹಜ ಸಾವುಗಳಿಗೆ ಸಂಬಂಧಿಸಿದ ದೇಹಗಳನ್ನು ತಾನೇ 15 ವರ್ಷಗಳ ಹಿಂದೆ ಮಣ್ಣುಮಾಡಿದ್ದಾಗಿ ಹೇಳಿಕೊಂಡ ‘ವ್ಯಕ್ತಿಯೊಬ್ಬರು’ ತೋರಿಸಿದ ಜಾಗದಲ್ಲಿ ನಿನ್ನೆಯಿಂದ ಅಗೆತ ಶುರುವಾಗಿದೆ.

ನಿನ್ನೆ ಯಾವುದೇ ದೇಹದ ಮೂಳೆ ತಲೆಬುರುಡೆಗಳು ಸಿಕ್ಕಿರಲಿಲ್ಲ. ಈ ವರೆರೆ ತಾನು ದೇಹಗಳನ್ನು ಹೂತಿರುವ 20ಕ್ಕೂ ಹೆಚ್ಚು ಜಾಗಗಳನ್ನು ವ್ಯಕ್ತಿಯು ಎಸ್‌ಐಟಿ ತಂಡಕ್ಕೆ ತೋರಿಸಿದ್ದು ಅವುಗಳಿಗೆ ನಂಬರ್ ನೀಡಿ ಗುರುತು ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!