September 22, 2026

ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಕುಸಿದು ಬಿದ್ದು ಯುವಕ ಸಾವು

0
image_editor_output_image1892482602-1753705375066.jpg

ಹೈದರಾಬಾದ್: ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ 25 ವರ್ಷದ ಯುವಕ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಹೈದರಾಬಾದ್ ನಲ್ಲಿ ವರದಿಯಾಗಿದೆ. ಮೃತರನ್ನು ಗುಂಡ್ಲಾ ರಾಕೇಶ್ (25) ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ಮೃತ ರಾಕೇಶ್ ಅವರನ್ನು ಖಮ್ಮಂ ಜಿಲ್ಲೆಯ ತಲ್ಲಡ ನಿವಾಸಿ ಎಂದು ಗುರುತಿಸಲಾಗಿದೆ. ಯುವಕ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

 

ಹೈದರಾಬಾದ್ ನ ನಾಗೋಲ್ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ಗುಂಡ್ಲಾ ರಾಕೇಶ್ ಏಕಾಏಕಿ ಕುಸಿದು ಬಿದ್ದಿದ್ದಾರೆ. ಪ್ರಜ್ಞಾಹೀನರಾಗಿದ್ದ ಅವರನ್ನು ಕೂಡಲೇ ಸಹ ಆಟಗಾರರು ಆಸ್ಪತ್ರೆಗೆ ಕರೆದೊಯ್ದುರು. ಆದರೆ ಯುವಕ ರಾಕೇಶ್ ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!