March 15, 2026

ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಆರೋಪಿಯ ಬಂಧನ

0
image_editor_output_image-114359578-1751795087219.jpg

ಉಡುಪಿ: ಕೊಳಲಗಿರಿ ನಿವಾಸಿ ಹುಡುಗಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಈಗ ಬೇರೆ ಮಹಿಳೆಯೊಂದಿಗೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಕೊಳಲಗಿರಿ ಗ್ರಾಮದ ನರ್ನಾಡುಗುಡ್ಡೆ ಲಕ್ಷ್ಮೀನಗರದ ನಿವಾಸಿ ಆರೋಪಿ ಸಂಜಯ್ ಕರ್ಕೇರ (28) ನನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸಂತ್ರಸ್ತೆ ಹಾಗೂ ಆರೋಪಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, 2024ರ ಜು.11ರಂದು ಆರೋಪಿಯೊಂದಿಗೆ ಆಕೆ ಕಳಸಕ್ಕೆ ತೆರಳಿದ್ದು, ಚಾರಣ ಮುಗಿದ ಅನಂತರ ಆಕೆಗೆ ಜ್ಯೂಸ್ ನೀಡಿ ಅರೆಪ್ರಜ್ಞೆ ಮಾಡಿ ದೈಹಿಕ ಸಂಪರ್ಕ ನಡೆಸಿದ್ದ.

ಅನಂತರ ಮದುವೆಯಾಗುವುದಾಗಿ ನಂಬಿಸಿ ಶೃಂಗೇರಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಸಿಂಧೂರವಿಟ್ಟು ಹೂವಿನ ಮಾಲೆ ಹಾಕಿದ್ದ. ಮುಂದೆ ಮನೆಯವರನ್ನು ಒಪ್ಪಿಸಿ ಮದುವೆಯಾಗುವ ಭರವಸೆ ನೀಡಿ ಹಲವಾರು ಬಾರಿ ಅತ್ಯಾಚಾ*ರ ಎಸಗಿದ್ದ ಎಂದು ಸಂತ್ರಸ್ತೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!