September 22, 2026

ರಸ್ತೆಬದಿ ಹೋಗುತ್ತಿದ್ದಾಗ ಕಾರು ಢಿಕ್ಕಿ: ಬಾಲಕ ಸ್ಥಳದಲ್ಲೇ ಸಾವು

0
image_editor_output_image696752161-1751669705382.jpg

ಚಿಕ್ಕೋಡಿ: ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ 10ರ ಬಾಲಕನ ಕಾರು ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಅಥಣಿ ತಾಲೂಕಿನ ರಡ್ಡೆರಟ್ಟಿ ಗ್ರಾಮದ ನಿವಾಸಿ ಅಗಸ್ತ್ಯ ಕನಮಡಿ (10) ಮೃತ ದುರ್ದೈವಿ ಬಾಲಕ.

 

ಮೃತ ಬಾಲಕ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಕಾರೊಂದು ಬಾಲಕನ ಮೇಲೆ ಹರಿದು ಹೋಗಿದೆ. ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದು, ಸಿಸಿಟಿವಿ ಆಧಾರದ ಮೇಲೆ ಆರೋಪಿ ರಾಹುಲ್ ಹುಂಡೇಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!