March 13, 2026

ಮಡಿಕೇರಿ: ಲಾರಿ ಮತ್ತು ಓಮ್ನಿ ನಡುವೆ ಅಪಘಾತ: ತಾಯಿ ಹಾಗೂ ಮಗ ಸ್ಥಳದಲ್ಲೇ ಮೃತ್ಯು

0
n6608196271744987545675d984d91e02b97bb802c650f3d51153773d1c7287f588a901c2603ee4616704c4.jpg

ಮಡಿಕೇರಿ: ಲಾರಿ ಮತ್ತು ಓಮ್ನಿ ನಡುವೆ ಢಿಕ್ಕಿ ಸಂಭವಿಸಿ ತಾಯಿ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕೊಡಗಿನ ಹಾತೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಬಿ.ಶೆಟ್ಟಗೇರಿ ಗ್ರಾಮದ ಅರ್ಚಕ ದಿ.ಪುಂಡರಿಕಾಕ್ಷ ಅವರ ಪತ್ನಿ ಲಲಿತ(70) ಹಾಗೂ ಪುತ್ರ ಸುದರ್ಶನ(42) ಎಂದು ಗುರುತಿಸಲಾಗಿದೆ.

ಮೈಸೂರಿನತ್ತ ಹೋಗುತ್ತಿದ್ದ ತರಕಾರಿ ಲಾರಿ ಮತ್ತು ಗೋಣಿಕೊಪ್ಪಲಿನಿಂದ ಬಿ.ಶೆಟ್ಟಿಗೇರಿಯತ್ತ ಬರುತ್ತಿದ್ದ ಮಾರುತಿ ಓಮ್ನಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಓಮ್ನಿಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಓಮ್ನಿ ನಜ್ಜುಗುಜ್ಜಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!