March 4, 2026

ಮಾರಕಾಸ್ತ್ರಗಳಿಂದ ಇರಿದು ವೈದ್ಯೆ ಪ್ರಿಯಾಂಕಾಳ ಹತ್ಯೆ

0
image_editor_output_image1141302493-1743119218532.jpg

ಚಂಡೀಗಢ: ವೈದ್ಯೆಯೊಬ್ಬಳನ್ನು ಮಾರಕಾಸ್ತ್ರಗಳಿಂದ ಇರಿದು ಹತ್ಯೆಗೈದ ಘಟನೆ ಚಂಡೀಗಢದ ಫರಿದಾಬಾದ್‌ನ ಬಲ್ಲಭ್‌ಗಢದಲ್ಲಿ ನಡೆದಿದೆ.

ವೈದ್ಯೆಯ ಪೋಷಕರು, ಪತಿ, ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.

ಪ್ರಿಯಾಂಕಾ (34) ಹತ್ಯೆಗೀಡಾದ ವೈದ್ಯೆಯಾಗಿದ್ದು, ಅವರು ಪತಿ ಲಕ್ಷ್ಮಿಚಂದ್‌ನನ್ನು ತೊರೆದು ತನ್ನ 14 ಮತ್ತು 10 ವರ್ಷದ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು.

ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾಳ ಪತಿ, ಕುಡಿದು ಬಂದು ಅವಳಿಗೆ ಹಿಂಸೆ ನೀಡುತ್ತಿದ್ದ. ಇಂದು ಆಕೆಯ ಹತ್ಯೆಯಾಗಿದೆ. ನಮಗೆ ಮಕ್ಕಳ ಬಗ್ಗೆ ಭಯ ಕಾಡುತ್ತಿದೆ ಎಂದು ಸಹೋದರಿ ಪೂಜಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!