March 19, 2026

ಸುರತ್ಕಲ್ ನಿವಾಸಿ ಮುಹಮ್ಮದ್ ಫೈಝಲ್ ನಾಪತ್ತೆ

0
image_editor_output_image-2001973181-1739526048205.jpg

ಮಂಗಳೂರು: ಸುರತ್ಕಲ್ ನಿವಾಸಿ ಮಹಮ್ಮದ್ ಫೈಜಲ್ (24) ನಾಪತ್ತೆಯಾಗಿರುವ ಕುರಿತಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇರಳಕಟ್ಟೆಯ ಕಾಲೇಜೊಂದರಲ್ಲಿ ಸಿವಿಲ್ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮುಗಿಸಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೊರಟು ಹೋಗಿದ್ದು, ಆ ಬಳಿಕ ಫೋನ್ ಕರೆಗೆ ಸಿಗದೆ, ಮನೆಗೂ ವಾಪಾಸಾಗದೆ ನಾಪತ್ತೆಯಾಗಿದ್ದಾನೆ.

ಸುಮಾರು 5.6 ಅಡಿ ಎತ್ತರ, ಸಾಧಾರಣ ಬಿಳಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ತಲೆ ಕೂದಲು, ಕನ್ನಡ ತುಳು, ಹಿಂದೆ, ಇಂಗ್ಲಿಷ್, ಬ್ಯಾರಿ ಭಾಷೆ ಬಲ್ಲವರಾಗಿದ್ದು, ಮನೆಯಿಂದ ತೆರಳುವಾಗ ಬಿಳಿ ಟಿ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಈ ಚಹರೆಯ ವ್ಯಕ್ತಿಯ ಕುರಿತಂತೆ ವಾಹಿತಿ ಇದ್ದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!