ಕಾಲೇಜಿನ ಜೂನಿಯರ್ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ರ್ಯಾಗಿಂಗ್: ಖಾಸಗಿ ಅಂಗಕ್ಕೆ ಡಂಬಲ್ಸ್ ನೇತು ಹಾಕಿ ವಿಕೃತಿ: ಕಾಲೇಜಿನ ಐವರು ವಿದ್ಯಾರ್ಥಿಗಳ ಬಂಧನ
ಕೊಟ್ಟಾಯಂ: ಕಾಲೇಜಿನ ಜೂನಿಯರ್ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಅವರ ಖಾಸಗಿ ಅಂಗಕ್ಕೆ ಡಂಬಲ್ಸ್ ನೇತು ಹಾಕಿ ರ್ಯಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅದೇ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿರುವ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ.
ಬಂಧಿತ ವಿದ್ಯಾರ್ಥಿಗಳನ್ನು ಕೊಟ್ಟಾಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್, ಕೆ.ಪಿ. ರಾಹುಲ್ ರಾಜ್, ಎನ್.ಎಸ್. ಜೀವಾ, ವಿವೇಕ್ ಎನ್.ಪಿ. ಮತ್ತು ಸಿ. ರಿಜಿಲ್ ಜಿತ್ ಎನ್ನಲಾಗಿದೆ.
ಈ ಐವರು ಮೊದಲ ವರ್ಷದ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಅವರ ಖಾಸಗಿ ಅಂಗಕ್ಕೆ ಡಂಬಲ್ಸ್ ನೇತು ಹಾಕಿ ರ್ಯಾಗಿಂಗ್ ನಡೆಸುತ್ತಿದ್ದರು ಜೊತೆಗೆ ಚೂಪಾದ ವಸ್ತುಗಳಿಂದ ಮೈಮೇಲೆ ಗಾಯಗೊಳಿಸುತ್ತಿದ್ದರು, ಅಲ್ಲದೆ ಗಾಯದ ಮೇಲೆ ಕೆಲವೊಂದು ಕ್ರಿಮ್ ಹಚ್ಚುತ್ತಿದ್ದರು ಇದರಿಂದ ವಿದ್ಯಾರ್ಥಿಗಳು ಕಿರುಚಿದಾಗ ಬಾಯಿಗೆ ಕೂಡ ಕ್ರಿಮ್ ಹಾಕಿ ವಿಕೃತಿ ಮೆರೆಯುತ್ತಿದ್ದರು.




