March 10, 2026

ಬಂಟ್ವಾಳ: ಅಡುಗೆ ಅನಿಲದ ಸಿಲಿಂಡರ್ ನಲ್ಲಿ ಬೆಂಕಿ: ಮನೆಯ ಸೊತ್ತುಗಳು ಸುಟ್ಟು ಭಸ್ಮ, ಓರ್ವನಿಗೆ ಗಾಯ

0
IMG-20250212-WA0045.jpg

ಬಂಟ್ವಾಳ : ಮನೆಯೊಂದರ ಅಡುಗೆ ಅನಿಲದ ಸಿಲಿಂಡರ್ ನಲ್ಲಿ ಸೋರಿಕೆಯುಂಟಾಗಿ ಬೆಂಕಿ ಕಾಣಿಸಿಕೊಂಡು, ಮನೆಯ ಸೊತ್ತುಗಳು ಸುಟ್ಟು ಭಸ್ಮವಾಗಿ, ಓರ್ವ ಗಾಯಗೊಂಡ ಘಟನೆ ಸಜೀಪಮೂಡ ಗ್ರಾಮದ ಸುಭಾಷ್ ನಗರದಲ್ಲಿ ನಡೆದಿದೆ.

ಸುಭಾಷ್ ನಗರ ನಿವಾಸಿ ಗಣೇಶ್ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂದಿಸಲು ಹೋದ ಗಣೇಶ್ ಅವರ ಕೈಗೆ ಗಾಯವಾಗಿದೆ. ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರು ಬೇಟಿ ನೀಡಿ ಬೆಂಕಿ ನಂದಿಸಿದ್ದಾರೆ.ಮನೆಯ ಗ್ಯಾಸ ಗೀಸರ್ ಫ್ರಿಡ್ಜ್ ಸುಟ್ಟು ಭಸ್ಮವಾಗಿದ್ದು, ಸುಮಾರು 75 ಸಾವಿರ ರೂ .ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!