March 20, 2026

ವಿಟ್ಲ ಜಾತ್ರೋತ್ಸವ-ಮಹಾರಥೋತ್ಸವ ಹಿನ್ನೆಲೆ: ವಾಹನ ಪಾರ್ಕಿಂಗ್ ಮಾರ್ಗಸೂಚಿ ಪ್ರಕಟಿಸಿದ ವಿಟ್ಲ ಪೊಲೀಸ್ ಠಾಣೆ

0
IMG-20250120-WA0004.jpg

ವಿಟ್ಲ: ಜಾತ್ರೋತ್ಸವ-ಮಹಾರಥೋತ್ಸವ ಹಿನ್ನೆಲೆ ವಾಹನ ಪಾರ್ಕಿಂಗ್ ಕಾರ್ಯಸೂಚಿಯನ್ನು ವಿಟ್ಲ ಪೊಲೀಸ್ ಠಾಣೆ ಪ್ರಕಟಿಸಿದೆ.

ಪಾರ್ಕಿಂಗ್ ಸ್ಥಳ ಮತ್ತು ಸೂಚನೆ:
1) ಕೇರಳ, ಅಡ್ಯನಡ್ಕ, ಪುಣಚ, ಕನ್ಯಾನ, ಕಡೆಯಿಂದ ಬರುವ ವಾಹನಗಳಿಗೆ – ಬಾಕಿಮಾರು ಗದ್ದೆ, ಅಡ್ಡದ ಬೀದಿ ಗದ್ದೆ.
2) ಪುತ್ತೂರು, ಕಬಕ, ಕಂಬಳಬೆಟ್ಟು, ಕುಂಡಡ್ಕ, ಕಡೆಯಿಂದ ಬರುವ ವಾಹನಗಳಿಗೆ- ಮೇಗಿನಪೇಟೆ ಬ್ರೈಟ್ ಹಾಲ್‌ನ ಪಾರ್ಕಿಂಗ್ ಸ್ಥಳ.
3) ಸಾಲೆತ್ತೂರು, ಕೊಳ್ನಾಡು, ಕುಡ್ತಮುಗೇರು, ಕಡೆಯಿಂದ ಬರುವ ವಾಹನಗಳಿಗೆ – ಸೈಂಟ್ ರೀಟಾ ಶಾಲಾ ಪಾರ್ಕಿಂಗ್ ಸ್ಥಳ.
4) ವಿಟ್ಲ, ಮಂಗಳಪದವು, ಅನಂತಾಡಿ ಕಡೆಯಿಂದ ಬರುವ ವಾಹನಗಳಿಗೆ – ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ.
5) ದೇವಸ್ಥಾನದ ಸುತ್ತಮುತ್ತ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ ಹಾಗೂ ಬೊಬ್ಬೇಕೇರಿ ರಥಬೀದಿ ಕ್ವಾಲಿಟಿ ಬೇಕರಿ ಬಳಿಯಿಂದಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.
6) ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
7) ದೇವಸ್ಥಾನಕ್ಕೆ ಬರುವ ಸಮಯ ಬೆಲೆಬಾಳುವ ವಸ್ತುಗಳ ಬಗ್ಗೆ ನಿಗಾ ವಹಿಸುವುದು.
8) ದೇವಸ್ಥಾನಕ್ಕೆ ಬರುವ ಸಮಯ ಕನಿಷ್ಟ ಒಬ್ಬರಾದರೂ ಮನೆಯಲ್ಲಿ ಇರುವಂತೆ ನಿಗಾವಹಿಸುವುದು.

Leave a Reply

Your email address will not be published. Required fields are marked *

error: Content is protected !!