February 4, 2026

ಕುದುರೆಮುಖ: ಹೊತ್ತಿ ಉರಿದ ಉಡುಪಿಯ ಟೂರಿಸ್ಟ್ ವಾಹನ‌

0
image_editor_output_image-846057058-1734173956677.jpg

ಕಾರ್ಕಳ: ಪಶ್ಚಿಮ ಘಟ್ಟದ ಕುದುರೆಮುಖದಲ್ಲಿ ಉಡುಪಿಯ ಟೂರಿಸ್ಟ್ ವಾಹನ‌ವೊಂದು (ಟಿಟಿ) ಹೊತ್ತಿ ಉರಿದ ಘಟನೆ‌ ಶನಿವಾರ ಸಂಭವಿಸಿದೆ‌.

ಉಡುಪಿಯಿಂದ ಮಾಳ ಮಾರ್ಗವಾಗಿ ಕುದುರೆಮುಖ ಮೂಲಕ ಕಳಸ ಕಡೆಗೆ ತೆರಳುತ್ತಿದ್ದ ಹನ್ನೊಂದು ಮಂದಿ ಇದ್ದ ಟೂರಿಸ್ಟ್ ವಾಹನದಲ್ಲಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿ ವಾಹನದ ತುಂಬಾ ವ್ಯಾಪಿಸಿದೆ‌.‌

ಚಾಲಕ ಸಹಿತ ವಾಹನದೊಳಗಿದ್ದವರು ಆತಂಕದಿಂದ ತಕ್ಷಣ ಹೊರ ಬಂದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಗ್ನಿ ಜ್ಚಾಲೆಗೆ ವಾಹನ‌ ಸಂಪೂರ್ಣ ಸುಟ್ಟು ಹೋಗಿದೆ‌‌. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.

Leave a Reply

Your email address will not be published. Required fields are marked *

error: Content is protected !!