March 18, 2026

ಪುತ್ತೂರು: ಕಂಪ್ಯೂಟರ್ ಸ್ವಿಚ್ ಆಫ್ ಮಾಡುವ ವೇಳೆ ಸಿಡಿಲು ಬಡಿದು ಗ್ರಾ.ಪಂ ಪಿಡಿಓ ಗಂಭೀರ

0
current_3038124_835x547-m

ಪುತ್ತೂರು: ಗುರುವಾರ ಸಂಜೆ ಸಿಡಿಲು ಬಡಿದ ಪರಿಣಾಮ ಪಂಚಾಯತ್ ಪಿಡಿಒ ಓರ್ವರು ಗಂಭೀರ ಗಾಯಗೊಂಡಿರುವ ಘಟನೆ ಬನ್ನೂರಿನಲ್ಲಿ ನಡೆದಿದೆ.
ಬನ್ನೂರು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ (40) ಗಂಭೀರವಾಗಿ ಗಾಯಗೊಂಡಿದ್ದಾರೆ.
ಇವರನ್ನು ತಕ್ಷಣವೇ ಪುತ್ತೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

ಗುಡುಗು ಸಿಡಿಲು ಬರುವ ಸಂದರ್ಭ ಚಿತ್ರಕಲಾ ಅವರು ಕಛೇರಿಯ ಕಂಪ್ಯೂಟರ್ ಸ್ವಿಚ್ ಆಫ್ ಮಾಡಲು ಮುಂದಾದ ವೇಳೆ ಈ ಘಟನೆ ಸಂಭವಿಸಿದೆ. ಅಲ್ಲೇ ಇದ್ದ, ಪಂಚಾಯತ್ ಅಧ್ಯಕ್ಷೆ ಸ್ಮಿತಾ ನಾಯಕ್, ಸದಸ್ಯರಾದ ಹರಿಣಾಕ್ಷಿ, ಜಯ, ರಾಘವೇಂದ್ರ, ತಿಮ್ಮಪ್ಪ ಪೂಜಾರಿ ತಕ್ಷಣವೇ ಕಾರಿನ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!