March 18, 2026

ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ವಾರ್ಷಿಕೋತ್ಸವ: ಜನಪ್ರಿಯ ಫೌಂಡೇಶನ್ ನ ಚೇಯರ್ಮ್ಯಾನ್ ಡಾ. ಅಬ್ದುಲ್ ಬಶೀರ್ ಗೆ ಸನ್ಮಾನ

0
image_editor_output_image75051473-1733401406978.jpg

ವಿಟ್ಲ: ಸೈಂಟ್ ರೀಟಾ ಆಂಗ್ಲ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜನಪ್ರಿಯ ಫೌಂಡೇಶನ್ ನ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ ಅವರು ಮಾತನಾಡಿ ಶಿಕ್ಷಣ ಮತ್ತು ಆರೋಗ್ಯ ಮುಖ್ಯವಾಗಿದೆ. ಶಿಕ್ಷಣದಿಂದ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡಲು ಸಾಧ್ಯ. ಸೈಂಟ್ ರೀಟಾ ಶಾಲೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಸತ್ಪಜೆಯನ್ನಾಗಿ ರೂಪಿಸುತ್ತಿದೆ. ಶಿಕ್ಷಣದ ಜತೆ ಸಂಸ್ಕಾರ ಕಳಿಸಬೇಕು. ತಂದೆ ತಾಯಿಗಳು ಹೆಚ್ಚು ಮಕ್ಕಳ ಬೆರೆಯಬೇಕು. ಮೊಬೈಲ್ ನಿಂದ ದೂರ ಮಾಡಬೇಕು ಎಂದರು.

ಮಂಗಳೂರು ಸಿಬಿಎಸ್ಇ ಇದರ ಕಾರ್ಯದರ್ಶಿ ಪ್ರವೀಣ್ ಲಿಯೋ ಲಸ್ರಾದೊ ಅಧ್ಯಕ್ಷ ವಹಿಸಿ ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಸಮಾಜದಲ್ಲಿ ಅವರು ಪ್ರಮಾಣಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ. ಶಿಕ್ಷಣದ ಜತೆ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದರು.‌

ಜನಪ್ರಿಯ ಫೌಂಡೇಶನ್ ನ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ ಮತ್ತು
ಪ್ರವೀಣ್ ಲಿಯೋ ಲಸ್ರಾದೊ ಅವರನ್ನು ಸನ್ಮಾನಿಸಲಾಯಿತು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸುನೀಲ್ ಪ್ರವೀಣ್ ಪಿಂಟೋ, ಸಿಆರ್ ಪಿ ಬಿಂಧು, ಸೈಂಟ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಜೋನೆಟ್ ಡಿ ಸೋಜ, ಚರ್ಚ್ ನ ಪಾಲನ ಸಮಿತಿ ಉಪಾಧ್ಯಕ್ಷ ವಿಜಯ ಪಾಯಸ್, ಮುಖ್ಯ ಶಿಕ್ಷಕಿ ಮರೀನಾ ಲಸ್ರೊದೊ, ಶಾಲಾ ನಾಯಕ ವೆಲೇನ್ ಸಿಕ್ವೆರಾ, ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ಐವನ್ ಮೈಕಲ್ ರೋಡ್ರಿಗಸ್ ಸ್ವಾಗತಿಸಿದರು. ಸಚಿನ್ ಮತ್ತು ಮೌನೀಕಾ ನಿರೂಪಿಸಿದರು. ವೈಷ್ಣವಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!