March 18, 2026

ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾಟ: ಭಾರತ ತಂಡವನ್ನು ಪ್ರತಿನಿಧಿಸಿದ ವಿಟ್ಲ ವಿಠಲ ಪ.ಪೂ ಕಾಲೇಜಿನ ವಿದ್ಯಾರ್ಥಿಗಳ ತಂಡ ಚಾಂಪಿಯನ್

0
image_editor_output_image196665842-1733395602140

ನೇಪಾಳದಲ್ಲಿ ಡಿಸೆಂಬರ್ 1-2 ರಂದು ನಡೆದ ಇಂಡೋ – ನೇಪಾಳ ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡದಲ್ಲಿ ನಮ್ಮ ವಿಟ್ಲ ಪದವಿಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಭಾಗವಹಿಸಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಲು ಕಾರಣಕರ್ತರಾಗಿರುತ್ತಾರೆ.

ಈ ತಂಡದ ಸಂಪೂರ್ಣ ಯಶಸ್ಸಿಗೆ ಕಾರಣರಾದ ವಿಟ್ಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ, 
ತರಬೇತುದಾರ, ರಾಷ್ಟ್ರೀಯ ಹ್ಯಾಂಡ್ ಬಾಲ್ ಆಟಗಾರ ನಮ್ಮ ಹೆಮ್ಮೆಯ ಶ್ರೀನಿವಾಸ ಗೌಡ ಇವರು. ಹೆಮ್ಮೆಯ ಆಟಗಾರರು : ಆಕಾಶ್, ಜಸ್ವಂತ, ಮೋಕ್ಷಿತ್, ಸುಬ್ರಹ್ಮಣ್ಯ, ಧ್ಯಾನ್, ಮೊಹಮ್ಮದ್ ಮುಸ್ತಾಕ್, ಮೊಹಮ್ಮದ್ ರಾಝಿ, ಮನೀಶ್, ಕೀರ್ತೇಶ್, ಉತ್ತಮ್, ಶ್ರವಣ್ ರೈ, ಕಿಶನ್. ಈ ಅಭೂತಪೂರ್ವ ಸಾಧನೆಯನ್ನು ವಿಠಲ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತಾಧಿಕಾರಿ, ಪ್ರಾಂಶುಪಾಲರುಗಳು, ನೌಕರ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ..

Leave a Reply

Your email address will not be published. Required fields are marked *

error: Content is protected !!