May 7, 2026

ಮಂಗಳೂರು: ಕೆಎಸ್ಸಾರ್ಟಿಸಿ ನೂತನ ‘ಅಶ್ವಮೇಧ’ ಬಸ್‌ನ ಗಾಜಿಗೆ ಹೆಲ್ಮೆಟ್‌ನಿಂದ ಬಡಿದು ಹಾನಿ: ಆರೋಪಿ ಪರಾರಿ

0
n641608055173307481479031c96573e7e09463a36ad9f926a76fa979a8b4a92fcd952a9e9775fb5f20a0a2.jpg

ಮಂಗಳೂರು: ಕೆಎಸ್ಸಾರ್ಟಿಸಿ ನೂತನ ‘ಅಶ್ವಮೇಧ’ ಬಸ್‌ನ ಗಾಜಿಗೆ ಹೆಲ್ಮೆಟ್‌ನಿಂದ ಬಡಿದು ಹಾನಿಯನ್ನುಂಟು ಮಾಡಿರುವ ಘಟನೆ ನಗರದ ಅಳಪೆ ಎಂಬಲ್ಲಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ. ದ್ವಿಚಕ್ರ ವಾಹನ ಅಡ್ಡ ಬಂದಿರುವ ವಿಚಾರವನ್ನು ಪ್ರಶ್ನಿಸಿದಕ್ಕಾಗಿ ಕೋಪಗೊಂಡ ಬೈಕ್ ಸವಾರ ಈ ಕೃತ್ಯ ಎಸಗಿದ್ದಾನೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್‌ಗೆ ಅಳಪೆ ಬಳಿ ದ್ವಿಚಕ್ರ ವಾಹನ ಅಡ್ಡ ಬಂದಾಗ ಬಸ್‌ನ ಚಾಲಕ ಇದನ್ನು ಪ್ರಶ್ನಿಸಿದ ಎನ್ನಲಾಗಿದೆ. ಈ ವೇಳೆ ಸಿಟ್ಟಿನಿಂದ ದ್ವಿಚಕ್ರ ವಾಹನ ಸವಾರ ಬಸ್‌ನ ಗಾಜಿಗೆ ಹೆಲ್ಮೆಟ್‌ನಿಂದ ಬಡಿದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಬಸ್‌ ಚಾಲಕ ಅರುಣ್ ಎಂಬವರ ಕೈಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಪೊಲೀಸರು ಬಸ್ ಚಾಲಕನನ್ನು ವಿಚಾರಿಸಿ, ಬೈಕ್‌ ಸವಾರನ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಪ್ರಯಾಣಿಸಲು ಬದಲಿ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!