March 19, 2026

ಕಾರವಾರ: ವಿದ್ಯುತ್ ವೈರ್‌ ಸ್ಪರ್ಶಿಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

0
image_editor_output_image-645503756-1732790368252.jpg

ಕಾರವಾರ: ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿನಿಗೆ ತುಂಡಾದ ವಿದ್ಯುತ್ ವೈರ್‌ ತಾಗಿ ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಎರಡನೇ ತರಗತಿ ಓದುತ್ತಿದ್ದ ಸಾನ್ವಿ ಬಸವರಾಜ ಗೌಳಿ (8) ಸ್ಥಳದಲ್ಲೇ ಸಾವು ಕಂಡ ಬಾಲಕಿಯಾಗಿದ್ದಾಳೆ. ಶಾಲೆಯ ಆವರಣದ ಶೌಚಾಲಯದ ಬಳಿಯೇ ಬೋರ್ವೆಲ್ ತೆಗೆಸಲಾಗಿದ್ದು, ಇದಕ್ಕೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು.

ಮುಖ್ಯ ಲೈನ್‌ನಿಂದ ಪಡೆದಿದ್ದ ತಂತಿ ತುಂಡಾಗಿ ಶೌಚಾಲಯದಲ್ಲಿ ಬಿದ್ದಿದ್ದು, ಬಾಲಕಿ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಶಾಲೆಯ ಮುಖ್ಯ ಶಿಕ್ಷಕರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಲ್ಲದೇ ವಿದ್ಯುತ್ ವೈರ್‌ ತುಂಡಾದರೂ ನಿರ್ಲಕ್ಷ ವಹಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!