ವಿಟ್ಲ: ನ.29ರಂದು ನಾಳೆ ಕೊಡಂಗಾಯಿ ಜಂಕ್ಷನ್ ನಲ್ಲಿ ನವೀಕೃತ ಮಸೀದಿ ಉದ್ಘಾಟನೆ: ಅಂತರಾಜ್ಯ ಮಟ್ಟದ ದಫ್ ಸ್ಪರ್ಧೆ ಮತ್ತು ಸ್ನೇಹ ಸಂಗಮ
ವಿಟ್ಲ: ಕೊಡಂಗಾಯಿ ಜಂಕ್ಷನ್ ನಲ್ಲಿ ಮಸ್ಜಿದುನ್ನೂರಿಯ ಕಮಿಟಿ ಇದರ ಅಧೀನದಲ್ಲಿ ಇಬ್ರಾಹಿಂ-ಅವ್ವ ಇವರ ಸ್ಮರಣಾರ್ಥ ನವೀಕೃತ ಮಸ್ಜಿದ್ ನೂರ್ 2024 ನವೆಂಬರ್ 29 ಶುಕ್ರವಾರ ಸಮಯ: ಸಾಯಂಕಾಲ 3:30 ಕ್ಕೆ ಉದ್ಘಾಟನೆಗೊಳ್ಳಲಿದೆ.
ಮಸ್ಜಿದ್ ಉದ್ಘಾಟನೆಯನ್ನು ಬಹು| ಸೈಯದುಲ್ ಉಲಮಾ ಅಸಯ್ಯದ್ ಮುಹಮ್ಮದ್ ಜಿಪ್ರೀ ಮುತ್ತುಕೋಯ ತಂಙಳ್ ನಿರ್ವಹಿಸಲಿದ್ದು, ವಕ್ಫ್ ನಿರ್ವಹಣೆ ಬಹು| ಹುಸೈನ್ ಸಅದಿ ಕೆ ಸಿ ರೋಡ್ ಉಸ್ತಾದ್ ನಿರ್ವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹು ಅಸಯ್ಯದ್ ಪೂಕುಂಞ ತಂಙಳ್ ಉದ್ಯಾವರ, ಸ್ವಾಗತ ಕೆಎಮ್ಎ ಕೊಡಂಗಾಯಿ, ಉದ್ಘಾಟನೆಯನ್ನು ಶೈಖುನಾ ಮಹಮೂದುಲ್ ಫೈಝಿ ವಾಲೆಮುಂಡೋವು ಉಸ್ತಾದ್,
ಪ್ರಾಸ್ತಾವಿಕ ಭಾಷಣ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಅಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಅಸಯ್ಯದ್ ಶಮೀಮ್ ತಂಙಳ್ ಅಲ್ ಬುಖಾರಿ ಮುದರ್ರಿಸ್ ದಾರುನ್ನಜಾತ್ ಟಿಪ್ಪುನಗರ, ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಅಲ್-ಖಾಸಿಮಿ ಬಂಬ್ರಾಣ ಉಸ್ತಾದ್, ಅಬ್ದುರ್ರಹ್ಮಾನ್ ಫೈಝೀ ಪರ್ತಿಪಾಡಿ, ಅಬೂಬಕರ್ ಸಿದ್ದೀಕ್ ಅರ್ಷದಿ ಖತೀಬರು ಎಂ ಜೆ ಎ, ಅಬ್ದುಲ್ ಖಾದರ್ ಹಾಜಿ ಪುತ್ತೂರು, ಸುರಯ್ಯಾ, ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ,
ಆಶಿಕ್ ಕುಂಬ್ರ ಕಾಂಟ್ರಾಕ್ಟ್, ಕೆ.ಬಿ. ಅಬ್ದುಲ್ ಖಾದರ್ ದಾರಿಮಿ ಕೊಡಂಗಾಯಿ, ಕೆ ಎಂ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ ಇನ್ನಿತರ ಗಣ್ಯರು ಕೂಡ ಭಾಗವಹಿಸಲಿದ್ದಾರೆ.
ರಾತ್ರಿ 7 ಗಂಟೆಗೆ ಅಂತರಾಜ್ಯ ಮಟ್ಟದ ದಫ್ ಸ್ಪರ್ಧೆ ಮತ್ತು ಸ್ನೇಹ ಸಂಗಮ ಜರಗಳಿದೆ. ಈ ಕಾರ್ಯಕ್ರಮದ ಪ್ರಯುಕ್ತ ತಾರೀಖು 30/11/2024 ರಂದು ಏಕದಿನ ಮತ ಪ್ರಭಾಷಣ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಬಹು ಅಸಯ್ಯಿದ್ ನೂರುಸ್ಸಾದಾತ್ ಬಾಯಾರ್ ತಂಙಲ್ ಹಾಗೂ ಬಹು ಖಲೀಲ್ ಹುದವಿ ಕಾಸರಗೋಡು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಹಾಗೂ ಇನ್ನಿತರ ಹಲವಾರು ಉಲಮಾ ಉಮರ ಹಾಗೂ ರಾಜಕೀಯ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ವಾಗತ ಸಮಿತಿ ಕನ್ವೀನರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಅಧ್ಯಕ್ಷರಾದ ಹಮೀದ್ ಟಿ ತಿಳಿಸಿದ್ದಾರೆ.




