ಉಪ್ಪಿನಂಗಡಿ: ವಾಹನ ಸ್ಕಿಡ್ ಆಗಿ ಬಿದ್ದು ಗಾಯ: ರಸ್ತೆಯ ಅವ್ಯವಸ್ಥೆ ವಿರುದ್ಧ ಪೊಲೀಸರಿಗೆ ದೂರು
ಉಪ್ಪಿನಂಗಡಿ: ಕುಮಾರಧಾರ ನದಿಯ ಸೇತುವೆಯ ಮೇಲೆ ಇರುವ ಹೊಂಡ ಹಾಗೂ ಕೆಸರುಮಯ ರಸ್ತೆಯಿಂದಾಗಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ 34 ನೆಕ್ಕಿಲಾಡಿ ನಿವಾಸಿ ಅಬ್ದುಲ್ ರೆಹೆಮಾನ್ ಯುನಿಕ್ ಅವರು ವಾಹನ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದು, ರಸ್ತೆಯ ಈ ಅವ್ಯವಸ್ಥೆಗೆ ಕಾರಣವಾಗಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸಂಸ್ಥೆ ಕೆಎನ್‌ಆರ್ ವಿರುದ್ಧ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ನ.25ರಂದು ರಾತ್ರಿ ಈ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಅಬ್ದುಲ್ ರೆಹಮಾನ್ ಯುನಿಕ್ ಅವರ ಕೈ, ಕಾಲುಗಳಿಗೆ ಗಾಯಗಳಾಗಿವೆ.
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವ ಅವರು ದೂರಿನಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸಂಸ್ಥೆಯಾದ ಕೆಎನ್‌ಆರ್ ಸಂಸ್ಥೆಯ ವಿರುದ್ಧ ಆರೋಪ ಮಾಡಿದ್ದಾರೆ.




