March 21, 2026

ಸಂಜು -‌ ತಿಲಕ್ ವರ್ಮಾ ಸ್ಪೋಟಕ ಬ್ಯಾಟಿಂಗ್: ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್‌ ರನ್ ಗಳ ಅಬ್ಬರ

0
Screenshot_20241115-210215_Instagram.jpg

ದಕ್ಷಿಣ ಆಫ್ರಿಕಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಮತ್ತು ಕೊನೆಯ ಪಂದ್ಯವು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಸದ್ಯ ಈ ಸರಣಿಯಲ್ಲಿ ಟೀಂ ಇಂಡಿಯಾ 2-1 ರಿಂದ ಮುನ್ನಡೆ ಸಾಧಿಸಿದ್ದು, ಸರಣಿ ಗೆಲ್ಲುವ ಅವಕಾಶವಿದೆ. 4 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 51 ಎಸೆತದಲ್ಲಿ ಶತಕ ಸಿಡಿಸಿ ದಾಖಲೆ ಬರೆದರೆ, ಇತ್ತ ತಿಲಕ್ ವರ್ಮಾ 41 ಎಸೆತದಲ್ಲಿ ಸೆಂಚುರಿ ಪೂರೈಸಿದರು.

ಆರಂಭಿಕ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭಕ್ಕೆ ಸೌತ್ ಆಫ್ರಿಕಾ ಕಂಗಾಲಾಗಿತ್ತು. ಆದರೆ ಅಭಿಷೇಕ್ ಶರ್ಮಾ, 18 ಎಸೆತದಲ್ಲಿ 36 ರನ್ ಸಿಡಿಸಿ ನಿರ್ಗಮಿಸಿದ್ದರು. ಅಭಿಷೇಕ್ 2 ಬೌಂಡರಿ 4 ಸಿಕ್ಸರ್ ಸಿಡಿಸಿದ್ದರು.

ಸಂಜು ಸ್ಯಾಮ್‌ಸನ್ 109 ಮತ್ತು ತಿಲಕ್ ವರ್ಮಾ 120 ರನ್ ಗಳ ನೆರವಿನಿಂದ ಇಂಡಿಯಾ 283 ಬೃಹತ್ ರನ್ ಗಳ ಟಾರ್ಗೆಟ್ ನೀಡಿದೆ

Leave a Reply

Your email address will not be published. Required fields are marked *

error: Content is protected !!