August 13, 2026

ಬುಡೋಳಿ ಆಶ್ರಫ್ ಕರಾವಳಿ ಹೃದಯಾಘಾತದಿಂದ  ನಿಧನ

0
image_editor_output_image528879190-1731686321709

ಬಂಟ್ವಾಳ: ಮಾಣಿ ಸಮೀಪದ ಬುಡೋಳಿ ನಿವಾಸಿ ಆಶ್ರಫ್ ಕರಾವಳಿ (52) ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ ನಿಧನರಾಗಿದರು.

ಅಶ್ರಫ್ ಅವರು ಶುಕ್ರವಾರದ ನಮಾಜಿಗೆ ಗಡಿಯಾರ ಮಸೀದಿಗೆ ತೆರಳಿದ್ದು, ನಮಾಜ್ ನಿರ್ವಹಿಸಿ ಮಸೀದಿಯಲ್ಲಿ ಕುಳಿತಿದ್ದ ವೇಳೆ ಹೃದಯಾಘಾತ ಸಂಭವಿಸಿತು. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಶ್ರಫ್ ಅವರು ಬುಡೋಳಿ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ಅದ್ಯಕ್ಷರಾಗಿದ್ದು, ಗಡಿಯಾರ ಜುಮಾ ಮಸೀದಿ, ಕಲ್ಲಡ್ಕ ರೇಂಜ್ ಮದ್ರಸ ಮೆನೇಜ್ಮೆಂಟ್ ಇದರ ಕಾರ್ಯದರ್ಶಿಯಾಗಿ ಹಾಗೂ ಇನ್ನಿತರ ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು, ತಂದೆ ಸುಲೈಮಾನ್ ಸಹಿತ 7 ಮಂದಿ ಸಹೋದರರು, ಓರ್ವ ಸಹೋದರಿಯ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!