March 18, 2026

ಕಡಬ: ಗ್ರಾಹಕ ಸೋಗಿನಲ್ಲಿ ಬಂದು ಮೊಬೈಲ್ ಕಳ್ಳತನ: ಕಳವು ದೃಶ್ಯ ಸಿಸಿಟಿವಿಯಲ್ಲಿ ಸೆರೆ

0
image_editor_output_image-1464117310-1731476645458.jpg

ಕಡಬ; ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳನೊಬ್ಬ ಗ್ರಾಹಕ ಸೋಗಿನಲ್ಲ ಬಂದು ಮೊಬೈಲ್ ಎಗರಿಸಿದ ಘಟನೆ ಕಡಬದ ಮುಖ್ಯ ಪೇಟೆಯ ಮೊಬೈಲ್ ಅಂಗಡಿಯೊಂದರಲ್ಲಿ ನಡೆದಿದೆ.ಸದ್ಯ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ನ.9ರಂದು ಘಟನೆ ನಡೆದಿದ್ದು ಸದ್ಯ ವೀಡಿಯೋ ವೈರಲ್ ಆಗುತ್ತಿದೆ.ಮೊಬೈಲ್ ಅಂಗಡಿ ಮಾಲೀಕರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಈ ವೇಳೆ ಅಂಗಡಿಯಲ್ಲಿ ಮತ್ತೋರ್ವ ಸಿಬ್ಬಂದಿ ಇನ್ನೊಂದು ಗ್ರಾಹಕರ ಜೊತೆ ಮಾತನಾಡುತ್ತಿದ್ದರು. ಆಗ ಅಂಗಡಿಗೆ ಬಂದ ಯುವಕ ಅಂಗಡಿಯಲ್ಲಿಟ್ಟಿದ್ದ ಮೊಬೈಲ್ ನ್ನು ಕಿಸೆಗೆ ಹಾಕಿಕೊಂಡು ಪರಾರಿಯಾಗಿದ್ದಾನೆ.

ಬಜಕರೆಯ ವ್ಯಕ್ತಿಯೊಬ್ಬರು ಸೇಲ್ ಮಾಡಲು ಆ ಪೋನ್ ನೀಡಿದ್ದು ಈ ಬಗ್ಗೆ ವಿಚಾರಿಸಲು ಬಂದಾಗ ಮೊಬೈಲ್ ಕಾಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಸಿಸಿಟಿವಿ ಪರಿಶೀಲಿಸಿದಾಗ ಬೊಳ್ಳೂರು ಸಮೀಪದ ಯುವಕ ಎಗರಿಸಿರುದು ಗೊತ್ತಾಗಿದೆ.ಸ್ಥಳೀಯರ ನೆರವಿನಿಂದ ಆತನ ಮನೆಗೆ ಹೋಗಿ ವಿಚಾರಿಸಿದಾಗ ಆತ ಇಲ್ಲದಿರುದನ್ನು ಕಂಡು ಪೊಲೀಸ್ ದೂರು ನೀಡುವ ಎಚ್ಚರಿಕೆ ನೀಡಿದ್ದರು. ಎರಡು ದಿನದ ಬಳಿಕ ಕಡಬದ ಗೂಡಂಗಡಿಯೊಂದರಲ್ಲಿ ಮೊಬೈಲ್‌ ಇಟ್ಟು ಮಾಹಿತಿ ನೀಡಿ ಹೋಗಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!