March 18, 2026

ಪುತ್ತೂರು: ಮಹಾಲಿಂಗೇಶ್ವರ ‌ದೇವಸ್ಥಾನಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್: ಈ ರೀತಿ ಉಡುಪು ಧರಿಸಿದರೆ ಮಾತ್ರ ಪ್ರವೇಶ

0
image_editor_output_image628783231-1731477243347.jpg

ಪುತ್ತೂರು: ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ‌ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಡುಪುಗಳ ಧರಿಸುವಿಕೆಗೆ ದೇವಳದ ಆಡಳಿತ ಮಂಡಳಿ ಮಾರ್ಗ ಸೂಚಿ ಬಿಡುಗಡೆ ಮಾಡಿದೆ.

ಪುರಾಣ ಪ್ರಸಿದ್ಧ ಪುತ್ತೂರು ಶ್ರೀ ‌ಮಹಾಲಿಂಗೇಶ್ವರ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ‌ದಿನದಿಂದ‌ ದಿನಕ್ಕೆ ಹೆಚ್ಚಿತ್ತಿದ್ದು ಅದರಂತೆ ಎ ಗ್ರೇಡ್ ದೇವಾಲಯವಾಗಿ ಮಾರ್ಪಟ್ಟಿದೆ.

ಈ ಹಿನ್ನೆಲೆಯಲ್ಲಿ ಮತ್ತು ಶಿಸ್ತು ಕಾಪಾಡಲು ಅನುಕೂಲವಾಗುವಂತೆ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರ ಸಂಹಿತೆಯ ಸಲುವಾಗಿ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಸಲಾಗಿದೆ. ಈ ಹಿಂದೆಯು ಬೋರ್ಡ್ ಅಳವಡಿಸಿದ್ದರು ಸಹ ಈ ಬಾರಿ ಕೆಲವೊಂದು ಚಿತ್ರಗಳನ್ನು ‌ಬರೆದು ಬೋರ್ಡ್ ಅಳವಡಿಸಿದ್ದು ಮುಂದೆ ಕ್ಷೇತ್ರಕ್ಕೆ ಬರುವ ಎಲ್ಲ ಭಕ್ತಾಧಿಗಳು ಈ ಸೂಚನೆಯನ್ನು ಕಡ್ಡಾಯವಾಗಿ ‌ಪಾಲಿಸುವಂತೆ ಮಹಾಲಿಂಗೇಶ್ವರ ‌ಭಕ್ತ ಸಮಾಜ ಸಾಮಾಜಿಕ ಜಾಲ ತಾಣಗಳ ಮೂಲಕ ಮನವಿ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!