ಮಹಿಳೆಯರ ಬಟ್ಟೆಗಳ ಅಳತೆ ಪುರುಷ ಟೈಲರ್ ತೆಗೆಯಬಾರದು: ರಾಜ್ಯ ಮಹಿಳಾ ಆಯೋಗ
ಹೊಸದಿಲ್ಲಿ: ಮಹಿಳೆಯರ ಬಟ್ಟೆಗಳ ಹೊಲಿಯಲು ಪುರುಷ ಟೈಲರ್ ಅಳತೆ ತೆಗೆಯಬಾರದು ಹಾಗೂ ಬ್ಯೂಟಿ ಪಾರ್ಲರ್‌ಗಳಲ್ಲಿ ಪುರುಷರು ಅವರ ಕೂದಲನ್ನು ಕತ್ತರಿಸಬಾರದೆಂಬ ಪ್ರಸ್ತಾವನೆಯನ್ನು ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಬಬಿತಾ ಚೌಹಾಣ್ ಮಂಡಿಸಿದ್ದು ಇದಕ್ಕೆ ಇತರ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಮಹಿಳೆಯರ ‘ಕೆಟ್ಟ ಸ್ಪರ್ಶ’ದಿಂದ ರಕ್ಷಿಸಲು ಮತ್ತು ಪುರುಷರ ಕೆಟ್ಟ ಉದ್ದೇಶಗಳ ತಡೆಯುವುದಾಗಿದೆ.
ಈ ಕುರಿತು ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಬಬಿತಾ ಚೌಹಾಣ್ ಮಾತನಾಡಿ ಪುರುಷರಿಗೆ ಮಹಿಳೆಯರ ಅಳತೆ ತೆಗೆದುಕೊಳ್ಳಲು ಅವಕಾಶ ನೀಡಬಾರದು ಮತ್ತು ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸುವುದು ಸೇರಿದಂತೆ ಹಲವು ಸಲಹೆಗಳ ನೀಡಲಾಗಿದೆ. ಮಹಿಳೆಯರು ಹೋಗುವ ಜಿಮ್‌ಗಳಲ್ಲಿ ಮಹಿಳಾ ತರಬೇತುದಾರರು ಇರಬೇಕು. ಎಲ್ಲಾ ಜಿಮ್ ತರಬೇತುದಾರರ ಪೊಲೀಸ್ ಪರಿಶೀಲನೆ ನಡೆಸಬೇಕು. ಒಬ್ಬ ಮಹಿಳೆ ಪುರುಷ ತರಬೇತುದಾರರಿಂದ ತರಬೇತಿ ಪಡೆಯಲು ಬಯಸಿದರೆ, ಅವಳು ಅದನ್ನು ಲಿಖಿತವಾಗಿ ನೀಡಬೇಕು.
ಏಕೆಂದರೆ, ಜಿಮ್‌ಗೆ ಹೋಗುವ ಮಹಿಳೆಯರು ಮತ್ತು ಬಾಲಕಿಯರ ಶೋಷಣೆಯ ದೂರುಗಳು ಮಹಿಳಾ ಆಯೋಗಕ್ಕೆ ನಿರಂತರವಾಗಿ ಬರುತ್ತಿದ್ದು, ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಹೆಣ್ಣು ಮಕ್ಕಳು ಪ್ರಯಾಣಿಸುವ ಶಾಲಾ ಬಸ್‌ಗಳಲ್ಲಿ ಮಹಿಳಾ ಉದ್ಯೋಗಿಗಳಿರಬೇಕು. ಸದ್ಯ ಮಹಿಳಾ ಆಯೋಗ ಎಲ್ಲ ಜಿಲ್ಲೆಗಳಿಗೂ ಈ ಸಂಬಂಧ ಆದೇಶ ನೀಡಿದೆ. ಒಪ್ಪದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.