February 4, 2026

ಮೀಯಪದವು: ವಿಷಪೂರಿತ ಹಾವು ಕಡಿತಕ್ಕೆ ಪಳ್ಳತ್ತಡ್ಕದ ವ್ಯಕ್ತಿ ಮೃತ್ಯು

0
image_editor_output_image912372900-1730010138451.jpg

ಕಾಸರಗೋಡು: ವಿಷಪೂರಿತ ಹಾವು ಕಡಿತಕ್ಕೊಳಗಾದ ವ್ಯಕ್ತಿಯೊಬ್ಬರು ಮೃತ ಪಟ್ಟ ಘಟನೆ ಕಾಸರಗೋಡು ಮಂಜೇಶ್ವರದ ಮೀಯಪದವು ಎಂಬಲ್ಲಿ ನಡೆದಿದೆ.

ಮೀಯಪದವು ಪಳ್ಳತ್ತಡ್ಕದ ಅಶೋಕ್ (43) ವಿಷಪೂರಿತ ಹಾವು ಕಡಿತಕ್ಕೆ ಒಳಪಟ್ಟು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಸೆ.18 ರಂದು ರಾತ್ರಿ ಮನೆಯ ಸಿಟೌಟ್ ನಲ್ಲಿ ಕುಳಿತಿದ್ದಾಗ ವಿಷಪೂರಿತ ಹಾವು ಕಡಿದಿತ್ತು. ಬಳಿಕ ಅಶೋಕ್‌ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮಂಜೇಶ್ವರ ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!