May 5, 2026

ಮಣಿಪಾಲ : ಬೆಳ್ಳಂಬೆಳಗ್ಗೆ ಪ್ರವಾಸಕ್ಕೆ ತೆರಳಿದ್ದ ಕಾರು ಭೀಕರ ಅಪಘಾತ

0
image_editor_output_image1328111537-1730005345007

ಮಣಿಪಾಲ: ಈಶ್ವರ ನಗರದ ನಗರಸಭೆ ರೇಚಕದ ಬಳಿ ಹಳೆಯ ರಸ್ತೆಯಲ್ಲಿ ಕಾರೊಂದು ನಿಯಂತ್ರಣ ತ*ಪ್ಪಿ ಪಕ್ಕದ ಮೋರಿಗೆ ಬಿದ್ದ ಘಟನೆ ರವಿವಾರ (ಅ.27) ಬೆಳಗ್ಗೆ ನಡೆದಿದೆ.

ಉಡುಪಿಯಿಂದ ಕುದುರೆಮುಖಕ್ಕೆ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. ಕಾರು ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ‌

ಇಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿ ಅಡ್ಡವಾಗಿ ರಸ್ತೆ ಆಗೆದಿದ್ದು ಮತ್ತೆ ಹೊಂಡ ಬಿದ್ದಿದೆ, ರಸ್ತೆಯ ಸುತ್ತಮುತ್ತ ಹೊಂಡ ಇರುವುದರಿಂದ ವಾಹನ ಚಾಲಕರು ಅತ್ತಿಂದಿತ್ತ ಚಲಿಸಿ ನಿಯಂತ್ರಣ ತಪ್ಪಿ ಅಪಘಾತವು ದಿನನಿತ್ಯ ಆಗುವಂತಾಗಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!