ನ. 22-24 ಸ ಅದಿಯ 55ನೇ ವಾರ್ಷಿಕ ಮಹಾ ಸಮ್ಮೇಳನ: ದ.ಕ ಈಸ್ಟ್ ಜಿಲ್ಲಾ ಲೀಡರ್ಸ್ ಮೀಟ್
ಪುತ್ತೂರು: ಅ.20/10/2024 ಪ್ರತಿಷ್ಠಿತ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಂಸ್ಥೆ ಕಾಸರಗೋಡು ಜಾಮಿಯಾ ಸ ಅದಿಯ ಅರೇಬಿಯಾ 55ನೇ ವಾರ್ಷಿಕ ಮಹಾ ಸಮ್ಮೇಳನ 2024 ನ 23, 24ರಂದು ಕಾಸರಗೋಡು ಸಅದಿಯದಲ್ಲಿ ನಡೆಯಲಿದೆ.
ಇದರ ಯಶಸ್ಸಿಗಾಗಿ ಪುತ್ತೂರು ಬಸ್ ನಿಲ್ದಾಣ ಸಮೀಪದ ಪ್ರಸ್ಟೇಜ್ ಹಾಲ್ ನಲ್ಲಿ ದ.ಕ ಈಸ್ಟ್ ಜಿಲ್ಲೆಯ ಸುನ್ನೀ ಸಂಘಟನೆಗಳ ಲೀಡರ್ಸ್ ಮೀಟ್ ಹಾಗೂ ಪ್ರಚಾರ ಸಮಿತಿ ರಚನಾ ಸಭೆ ನಡೆಯಿತು.
ಹಾಜಿ ಅಬ್ದುರ್ರಹ್ಮಾನ್ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. SMA ರಾಜ್ಯ ಕೋಶಾಧಿಕಾರಿ ಹಾಜಿ ಹಮೀದ್ ಕೊಡಂಗಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ ಅದಿಯ ಸಮ್ಮೇಳನ ಪ್ಲಾನಿಂಗ್ ಬೋರ್ಡ್ ಚೆಯರ್ ಮ್ಯಾನ್ ಹಾಫಿಲ್ ಯಾಕೂಬ್ ಸಅದಿ ನಾವೂರು ವಿಷಯ ಮಂಡಿಸಿದರು. ಯಸ್ ವೈಸ್ ದ.ಕ ಈಸ್ಟ್ ಪ್ರೆಸಿಡೆಂಟ್ ಅಝೀಝ್ ಮಿಸ್ಬಾಯಿ ಐಮಂಗಳ, ಎಸ್ ಎಸ್ ಎಫ್ ಡಿವಿಷನ್ ಅಧ್ಯಕ್ಷ ಅಸಯ್ಯ ದ್ ಸಾಬಿತ್ ತಂಙಳ್ ಮೊದಲಾದವರು ಮಾತನಾಡಿದರು.
ನಂತರ ಜಿಲ್ಲಾ ಪ್ರಚಾರ ಸಮಿತಿ ರಚಿಸಲಾಯಿತು. ಚೇರ್ ಮ್ಯಾನ್ ಹಾಜಿ ಅಬ್ದುರ್ರಹ್ಮಾನ್ ಅರಿಯಡ್ಕ, ಜನರಲ್ ಕನ್ವೀನರ್ ಇಕ್ಬಾಲ್ ಬಪ್ಪಳಿಗೆ, ಕೋಶಾಧಿಕಾರಿ ಯೂಸುಫ್ ಸಾಜ, ವೈಸ್ ಚರ್ಮನ್ ಗಳಾಗಿ ಸಂಘಟನ ನಾಯಕರಾದ ಇಸ್ಮಾಯಿಲ್ ಹಾಜಿ ಬನ್ನೂರು, ಇಕ್ಬಾಲ್ ಬಪ್ಪಳಿಗೆ, ಜಿ ಯಂ ಉಸ್ತಾದ್, ಇಸ್ಮಾಯಿಲ್ ಹಾಜಿ ಬನ್ನೂರು, ಜಲೀಲ್ ಸಖಾಫಿ ಜಾಲ್ಸೂರು, ಅಶ್ರಫ್ ಸಖಾಫಿ ಕನ್ಯಾನ,ಹಮೀದ್ ಹಾಜಿ ಕೊಡಂಗಾಯಿ, ಹಕೀಂ ಶಾಂತಿನಗರ, ಮುಹಮ್ಮದ್ ಮಿಸ್ಬಾಯಿ, ಹಂಝ ಮದನಿ, ಹಮೀದ್ ಸಅದಿ, ಇಸ್ಮಾಯಿಲ್ ವೆಣೂರು, ವೈಸ್ ಕನ್ವೀನರ್ ಇಬ್ರಾಹಿಂ (ಇಬ್ಬ) ಬಪ್ಪಳಿಗೆ, ಶಫೀಖ್ ತಿಂಗಳಾಡಿ, ಅಬ್ದುರಝಾಖ್ ಸಅದಿ ಕೊಡಿಪ್ಪಾಡಿ, ಸ್ವಾಲಿಹ್ ಮುರ, ಸಿರಾಜುದ್ದೀನ್ ಸಖಾಫಿ, ಶಾಖಿರ್ ಹಾಜಿ, ಸೈಫುಲ್ಲಾ ಸಅದಿ, ಉಮರ್ ವೇಣೂರು, ಅಬೂಸಝ ಉಸ್ತಾದ್, ತ್ವಾಹ ಸಅದಿ, ಉವೈಸ್ ಬೀಟಿಗೆ, ಸದಸ್ಯರಾಗಿ ಉಮರ್ ಸಅದಿ, ಮುಹಮ್ಮದ್ ಸಅದಿ, ನೌಶಾದ್ ಸಅದಿ, ಹನೀಫ್ ಸಅದಿ, ನೆಝೀರ್ ಸಅದಿ, ಉಮರ್ ಕೆ ಪಿ, ಆರಿಸ್ ಅಡ್ಕ, ಸೈಫುಲ್ಲಾ ಸಅದಿ ಹೀಗೆ ಒಟ್ಟು ಐವತ್ತು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸೈಫುಲ್ಲಾ ಸಅದಿ ಸ್ವಾಗತಿಸಿ ಅಬ್ದುರಝಾಖ್ ಸಅದಿ ಕೊಡಿಪ್ಪಾಡಿ ವಂದಿಸಿದರು.




