March 21, 2026

ಉಪ್ಪಿನಂಗಡಿ: ವ್ಯಾಟ್ಸ್ ಆ್ಯಪ್ ನಲ್ಲಿ ಸ್ಟೇಟಸ್ ಹಾಕಿ ಪುಲ್ಲೊಟ್ಟೆ‌ ನಿವಾಸಿ ಆತ್ಮಹತ್ಯೆ

0
image_editor_output_image-1327683547-1727036519644.jpg

ಉಪ್ಪಿನಂಗಡಿ: ಕುಡಿತದ ಚಟಕ್ಕೆ ಬಿದ್ದಿದ್ದ ವ್ಯಕ್ತಿಯೊಬ್ಬರು ವ್ಯಾಟ್ಸಾಪ್‌ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದಲ್ಲಿ ನಡೆದಿದೆ. ಪುಲ್ಲೊಟ್ಟೆ ನಿವಾಸಿ ಲೋಹಿತ್ ಕುಮಾರ್ (47) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಲೋಹಿತ್ ಕುಮಾರ್ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ವಿಪರೀತವಾದ ಮದ್ಯಪಾನದ ಚಟ ಅಂಟಿಸಿಕೊಂಡಿದ್ದರು.

ಇದೇ ಕಾರಣದಿಂದ ನಿತ್ಯ ಪತ್ನಿ ಹಾಗೂ ಮಕ್ಕಳ ಜೊತೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಪತ್ನಿ ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೊರಟು ಹೋಗಿದ್ದರು. ಇದರಿಂದ ಮನನೊಂದ ಲೋಹಿತ್ ಕುಮಾರ್ ಸೆಪ್ಟಂಬರ್ 18 ರಂದು ಗುಂಡ್ಯಕ್ಕೆ ಹೋಗಿ ವಾಪಾಸಾದವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!