May 6, 2026

ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲೇ Laptop ಕಳವು: ಆರೋಪಿ ಸಹಿತ ಬರೋಬ್ಬರಿ 55 laptop ಜಪ್ತಿ

0
image_editor_output_image1321033511-1727035814029.jpg

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್‌ಗ್ಳನ್ನು ಕಳವು ಮಾಡುತ್ತಿದ್ದ ಸಿಬ್ಬಂದಿಯನ್ನು ವೈಟ್‌ ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಹೊಸೂರು ತಾಲೂಕಿನ ತೋರಪಲ್ಲಿ ನಿವಾಸಿ ಮುರುಗೇಶ್‌ (29) ಬಂಧಿತ. ಆರೋ ಪಿಯಿಂದ 22 ಲಕ್ಷ ರೂ. ಮೌಲ್ಯದ 55 ಲ್ಯಾಪ್‌ಟಾಪ್‌ ಗಳನ್ನು ಜಪ್ತಿ ಮಾಡಲಾಗಿದೆ.

ವೈಟ್‌ ಫೀಲ್ಡ್‌ನ ಐಟಿಪಿಎಲ್‌ ಟೆಲಿಕಾಲರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲಿ ಆಗಾಗ್ಗೆ ಒಂದೊಂದು ಲ್ಯಾಪ್‌ ಟಾಪ್‌ಗಳು ಕಳುವಾಗುತ್ತಿದ್ದವು. ಈ ಸಂಬಂಧ ಕಂಪನಿ ಮಾಲಿಕ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕಮಿಷನರ್‌ ದಯಾನಂದ ತಿಳಿಸಿದ್ದಾರೆ.
ಆರೋಪಿಯು ಕದ್ದ ಲ್ಯಾಪ್‌ಟಾಪ್‌ ಗಳನ್ನು ಹೊಸೂರಿನ ಹಳೆಯ ಲ್ಯಾಪ್‌ ಟಾಪ್‌ ರಿಪೇರಿ ಮತ್ತು ಮಾರಾಟ ಮಳಿಗೆಗೆ ಮಾರಾಟ ಮಾಡುತ್ತಿದ್ದ ಎಂದರು.

Leave a Reply

Your email address will not be published. Required fields are marked *

error: Content is protected !!