ಶ್ರೀಮಹಾಂಕಾಳಿ ದೇವರಿಗೆ ಹಾಕಲಾದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು: ಅರ್ಚಕನ ಬಂಧನ
ಗಂಗೊಳ್ಳಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಂಕಾಳಿ ದೇವಸ್ಥಾನದ ದೇವರಿಗೆ ಹಾಕಲಾದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಪೂಜೆ ಮಾಡುವ ಅರ್ಚಕರೇ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.
ದೇವಸ್ಥಾನದಲ್ಲಿ ಕಳೆದ ಮೇ ತಿಂಗಳಿನಿಂದ ಪೂಜೆ ಮಾಡುತ್ತಿದ್ದ ಅರ್ಚಕ ನರಸಿಂಹ ದೇವರ ಚಿನ್ನಾಭರಣ ಕದ್ದ ಆರೋಪಿ.
ಭಕ್ತರು ಹಾಗೂ ಆಡಳಿತ ಮಂಡಳಿಯವರು ದೇವರಿಗೆ ಸಮರ್ಪಿಸಿದ 264 ಗ್ರಾಂ. ತೂಕದ ಚಿನ್ನಾಭರಣಗಳನ್ನು ಅರ್ಚಕ ತೆಗೆದು, ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಕಳವಾದ ಚಿನ್ನಾಭರಣದ ಮೌಲ್ಯ 21.12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕೆಲ ಚಿನ್ನಾಭರಣಗಳನ್ನು ತೆಗೆದು, ಅದರ ಬದಲು ನಕಲಿ ಚಿನ್ನಾಭರಣಗಳನ್ನು ಇರಿಸಿದ್ದಾರೆ.




