February 3, 2026

ಮಾಣಿ: ಮೀಲಾದ್ ಪ್ರಯುಕ್ತ ಸಿಹಿ ತಿಂಡಿ ವಿತರಿಸಿದ ಹಿಂದೂ ಬಾಂಧವರು

0
IMG-20240916-WA0002.jpg

ವಿಟ್ಲ: ತಾಲೂಕಿನ ಮಾಣಿ ಜಂಕ್ಷನ್ ಮತ್ತು ಕೊಡಾಜೆಯಲ್ಲಿ ಮುಸ್ಲಿಮರಿಗೆ ಹಿಂದೂಗಳು ಸಿಹಿ, ಐಸ್ಕ್ರೀಂ, ನೀರಿನ ಬಾಟಲಿ ವಿತರಣೆ ಮಾಡಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

ಮಾಣಿ ಜಂಕ್ಷನ್ ನಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಕೇಸರಿ ಶಾಲು‌ ಹಾಕಿಕೊಂಡು ಹಿಂದೂ ಯುವಕರು ಮುಸ್ಲಿಂ ಮುಖಂಡರು ಮತ್ತು ಮಕ್ಕಳಿಗೆ ಸಿಹಿ, ಐಸ್ಕ್ರೀಂ, ನೀರಿನ ಬಾಟಲ್ ವಿತರಣೆ ಮಾಡಿದರು.

ಕೊಡಾಜೆಯಲ್ಲೂ ಕೂಡ ಹಿಂದೂಗಳು ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಮುಸ್ಲಿಮರಿಗೆ ಸಿಹಿ ಹಂಚಿದರು. ಜುಮ್ಮಾ ಮಸೀದಿಯಿಂದ ಬಂದಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರಿಗೆ ಹಿಂದೂಗಳು ಸ್ವೀಟ್ ಬಾಕ್ಸ್ ವಿತರಿಸಿ ಹಬ್ಬದ ಶುಭಾಶಯ ಕೋರಿದರು.

Leave a Reply

Your email address will not be published. Required fields are marked *

You may have missed

error: Content is protected !!