May 5, 2026

ಮುಲ್ಕಿ: ರಸ್ತೆ ದಾಟುತ್ತಿದ್ದ ಮಹಿಳೆಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಪಲ್ಟಿ: ಮಹಿಳೆ ಗಂಭೀರ ಗಾಯ

0
IMG-20240907-WA0013.jpg

ಮುಲ್ಕಿ: ಆಟೋ ರಿಕ್ಷಾ ಢಿಕ್ಕಿಯಾಗಿ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಕಿನ್ನಿಗೋಳಿ ಉಲ್ಲಂಜೆ ಕಟೀಲು ಹೆದ್ದಾರಿಯ ಸಮೀಪ ನಡೆದಿದೆ.

ಗಾಯಗೊಂಡ ಮಹಿಳೆಯನ್ನು ಕಿನ್ನಿಗೋಳಿ ರಾಜರತ್ನಾಪುರ ನಿವಾಸಿ ಚೇತನ (35) ಎಂದು ಗುರುತಿಸಲಾಗಿದೆ.

ಗಾಯಾಳು ಮಹಿಳೆ ಚೇತನ ಕಿನ್ನಿಗೋಳಿ ಪರಿಸರದಲ್ಲಿ ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದು ತಮ್ಮ ಮಗಳನ್ನು ಟ್ಯೂಷನ್ ಕ್ಲಾಸಿನಿಂದ ಕರೆದುಕೊಂಡು ಬರಲು ಏಕಾಏಕಿ ರಸ್ತೆ ದಾಟುತ್ತಿದ್ದಾಗ ಕಟೀಲು ಕಡೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಆಟೋ ಢಿಕ್ಕಿಯಾಗಿ ಮಹಿಳೆಯ ಮೇಲೆ ಬಿದ್ದಿದೆ. ಕೂಡಲೇ ಸ್ಥಳೀಯರು ಆಟೋ ಮೇಲೆತ್ತಿ ಗಾಯಾಳು ಮಹಿಳೆಯನ್ನು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಸುರತ್ಕಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಅಪಘಾತ ಸ್ಥಳೀಯ ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!