December 19, 2025

ವಿಷಕಾರಿ ಕಾಳಿಂಗ ಸರ್ಪ ಕಚ್ಚಿ ಮೂವರು ಮಕ್ಕಳು ದಾರುಣ ಸಾವು

0
image_editor_output_image669202644-1725701505782.jpg

ರಾಂಚಿ: ಆನೆ ದಾಳಿಯ ಭಯದಿಂದ ಜತೆಯಲ್ಲಿ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತದಿಂದ ಮೃತಪಟ್ಟಿರುವ ದಾರುಣ ಘಟನೆ ಜಾರ್ಖಂಡ್‌ನ ಗರ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿರುವುದಾಗಿ ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಚಿನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಚಪ್ಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುರುವಾರ(ಸೆ.5) ರಾತ್ರಿ ಆನೆ ದಾಳಿಗೆ ಹೆದರಿ ಒಂದೇ ಕುಟುಂಬದ ಸುಮಾರು 8 ರಿಂದ 10 ಮಕ್ಕಳು ತಮ್ಮ ಹೆಂಚಿನ ಮನೆಯ ನೆಲದ ಮೇಲೆ ಮಲಗಿದ್ದರು. ಈ ವೇಳೆ ಮನೆಯೊಳಗೆ ವಿಷಕಾರಿ ಕಾಳಿಂಗ ಸರ್ಪವೊಂದು ಬಂದು ಮೂವರು ಮಕ್ಕಳಿಗೆ ಕಚ್ಚಿದೆ.

ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಮನೆಯವರು ಮಾಂತ್ರಿಕನ ಮನೆಯೊಂದಕ್ಕೆ ರಾತ್ರಿ 1 ಗಂಟೆಗೆ ಕರೆದುಕೊಂಡು ಹೋಗಿದ್ದಾರೆ. ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನು ಮೂರನೇ ಮಗುವನ್ನು ನಕಲಿ ವೈದ್ಯನ ಬಳಿಕ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಆ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!