ಉಪ್ಪಿನಂಗಡಿ: ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದ ಮಹಿಳೆ ನಾಪತ್ತೆ
ಉಪ್ಪಿನಂಗಡಿ: ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದ ವಿವಾಹಿತ ಮಹಿಳೆಯೋರ್ವರು ಮನೆಗೆ ಬಾರದೇ ನಾಪತ್ತೆಯಾದ ಘಟನೆ ನೆಲ್ಯಾಡಿ ಗ್ರಾಮದ ಕೂವೆಕೊಪ್ಪ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಕೂವೆಕೊಪ್ಪ ನಿವಾಸಿ ನಾಗೇಶ ಎಂಬವರ ಪತ್ನಿ, ಮೂವರು ಮಕ್ಕಳ ತಾಯಿ ಭಾರತಿ (35) ನಾಪತ್ತೆಯಾದ ಮಹಿಳೆ. ಈ ಬಗ್ಗೆ ಈಕೆಯ ಪತಿ ನಾಗೇಶ ಎಂಬವರು ದೂರು ನೀಡಿದ್ದು, ಈಕೆ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಮನೆ ರಿಪೇರಿಗೆಂದು 85 ಸಾವಿರ ರೂ. ಸಾಲವನ್ನು ಪಡೆದಿದ್ದು, ಬಳಿಕ ಕಳೆದ ಜು.7ರಂದು ಇವರ ಪತಿ ಕೂಲಿ ಕೆಲಸಕ್ಕೆಂದು ಹೋದ ಬಳಿಕ ಈಕೆ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ತೆರಳಿದ್ದಳು.





