ಕುಂದಾಪುರ: ಹೆಮ್ಮಾಡಿಯ ಹೆದ್ದಾರಿಯಲ್ಲಿ ಆಯಿಲ್: ಸ್ಕಿಡ್ ಆಗಿ ಬಿದ್ದ ದ್ವಿಚಕ್ರವಾಹನಗಳು
ಕುಂದಾಪುರ: ಯಾವುದೋ ಒಂದು ಆಯಿಲ್ ಟ್ಯಾಂಕರ್ ನಿಂದ ಆಯಿಲ್ ಸೋರಿಕೆಯಾದ ಕಾರಣ ದ್ವಿಚಕ್ರವಾಹನ ಸವಾರರು ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದ ಘಟನೆ ಕುಂದಾಪುರದಲ್ಲಿ ವರದಿಯಾಗಿದೆ.
ಕುಂಭಾಶಿಯಿಂದ ಹೆಮ್ಮಾಡಿ ತನಕ ಹೆದ್ದಾರಿಯಲ್ಲಿ ಆಯಿಲ್ ಚೆಲ್ಲಿದೆ. ಈ ವೇಳೆ ಮಳೆ ಬಂದ ಕಾರಣ ಆಯಿಲ್ ರಸ್ತೆ ತುಂಬಾ ಪಸರಿಸಿದ್ದು. ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದಿದ್ದಾರೆ.
ಕಾರು ಮೊದಲಾದ ಲಘು ವಾಹನಗಳೂ ಬ್ರೇಕ್ ಸಿಗದೇ ಸಣ್ಣ ಪುಟ್ಟ ಅವಘಡಗಳು ನಡೆದಿದೆ. ಘಟನೆ ಬೆಳಕಿಗೆ ಬರುತ್ತಲೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಉಡುಪಿ-ಬೈಂದೂರು ಮಾರ್ಗದ ಒಂದು ಕಡೆ ರಸ್ತೆಯನ್ನು ಬಂದ್ ಮಾಡುವ ಮೂಲಕ ಏಕಮುಖ ಸಂಚಾರಕ್ಕೆ ಅನುವು ಮಾಡಿದ್ದು ಟ್ಯಾಂಕರ್ ಪತ್ತೆಗೆ ಮುಂದಾಗಿದ್ದಾರೆ.





