February 3, 2026

ಕುಂದಾಪುರ: ಹೊಳೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

0
image_editor_output_image-1333898111-1725599137597.jpg

ಕುಂದಾಪುರ: ಮೆಡಿಕಲ್ ಓದುವ ಆಸೆ ಇದ್ದ ವಿದ್ಯಾರ್ಥಿಯೊಬ್ಬ ಬೆಂಗಳೂರಿನಲ್ಲಿ ಇಂಜಿನಿಯರಿಂಗ್‌ ಸೀಟು ಸಿಕ್ಕಿತ್ತೆಂದು ಬೇಸರಗೊಂಡು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಕುಂದಾಪುರ ತಾಲೂಕಿನ ಹಳ್ಳಾಡು ಎಂಬಲ್ಲಿ ನಡೆದಿದೆ.

ಹಲ್ನಾಡು ಗ್ರಾಮದ ಶಿವಪ್ರಸಾದ್‌ ಶೆಟ್ಟಿ ಎಂಬುವರ ಮಗ ಸುಪ್ರಜ್ ಶೆಟ್ಟಿ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಕುಂದಾಪುರದ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಿಯು ವಿದ್ಯಾಭ್ಯಾಸ ಮಾಡಿದ್ದ ಸುಪ್ರಜ್ ಶೆಟ್ಟಿಗೆ ಮೆಡಿಕಲ್ ಓದುವ ಆಸೆ ಇಟ್ಟುಕೊಂಡಿದ್ದಾನೆ. ಆದರೆ ಆತನಿಗೆ ಬೆಂಗಳೂರಿನಲ್ಲಿ ಇಂಜಿನಿಯರ್ ಸೀಟ್ ದೊರಕಿತ್ತು.

ಇದು ಆತನಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಆತನ ಮನೆಯವರು ಮಾತ್ರ ಮಗನಿಗೆ ಬುದ್ದಿವಾದ ಹೇಳಿ ಬೆಂಗಳೂರಿಗೆ ಕಳುಹಿಸಲು ಬಟ್ಟೆಬರೆಗಳನ್ನು ಪ್ಯಾಕ್ ಮಾಡಿ ರೆಡಿ ಮಾಡಿದ್ದಾರೆ. ಗುರುವಾರ ಆತ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ಬುಧವಾರ ಸಂಜೆ ಹಳ್ಳಾಡು ಮನೆಯ ಸಮೀಪದ ಹೊಳೆಯ ಬದಿಯಲ್ಲಿ ತನ್ನ ಚಪ್ಪಲಿ ಮತ್ತು ಮೊಬೈಲ್ ಬಿಟ್ಟಿರುವುದು ಕಂಡು ಬಂದಿದೆ.

ಇದರಿಂದ ಅನುಮಾನಗೊಂಡ ಮನೆಯವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಗುರುವಾರ ಮಧ್ಯಾಹ್ನ ಮೃತದೇಹ ಅದೇ ಹೊಳೆಯಲ್ಲಿ ಪತ್ತೆಯಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!