ಮನೆಬಾಗಿಲಿಗೆ ಬಾರದ ಕಸ ವಿಲೇವಾರಿ ವಾಹನ: ಕಸವನ್ನು ಗ್ರಾಮ ಪಂಚಾಯತ್ ಬಾಗಿಲಿಗೆ ಸುರಿದ ವ್ಯಕ್ತಿ
ಕೊಟ್ಟಿಗೆಹಾರ: ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ವಾಹನ ಸಮಯಕ್ಕೆ ಸರಿಯಾಗಿ ಬಂದಿಲ್ಲವೆಂದು ಮನೆಯ ಕಸವನ್ನು ಗ್ರಾಮ ಪಂಚಾಯತ್ ಬಾಗಿಲಿಗೆ ಸುರಿದ ಘಟನೆ ಬಣಕಲ್ ಗ್ರಾಮ ಪಂಚಾಯತ್ ಯಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ವಾಹನ ದಿನಕ್ಕೆ ಎರಡು ಬಾರಿ ಬರುತ್ತಿದ್ದು, ಮನೆ ಮಾಲೀಕರು ವಾಹನ ಬಂದ ಸಮಯಕ್ಕೆ ಸರಿಯಾಗಿ ಬಾರದೆ ಈ ರೀತಿ ಕೃತ್ಯ ಎಸಗಿದ್ದಾರೆರೆಂದು ಸಮಾಜ ಸೇವಕ ಆರಿಫ್ ಆರೋಪಿಸಿದ್ದಾರೆ.
ಬಣಕಲ್ ಗ್ರಾಮ ಪಂಚಾಯತ್ ನ ಕಸ ವಿಲೇವಾರಿ ವಾಹನಕ್ಕೆ ಚಾಲಕರಿಲ್ಲದೆ ಸಮಾಜ ಸೇವಕ ಆರೀಫ್ ಅವರೇ ಸಮಾಜ ಸೇವೆಯ ದೃಷ್ಟಿಯಿಂದ ಕಸ ವಿಲೇವಾರಿ ವಾಹನವನ್ನು ಚಲಾಯಿಸುತ್ತಿದ್ದು ಇವರು ದಿನಕ್ಕೆ ಎರಡು ಬಾರಿ ಬಂದರು ಈ ವ್ಯಕ್ತಿ ಮಾತ್ರ ಈ ರೀತಿ ಮಾಡಿರುವುದು ಗ್ರಾಮಸ್ಥರೆಲ್ಲರಿಗೂ ಬೇಸರ ತರಿಸಿದೆ ಎಂದು ಗ್ರಾಮಸ್ಥರಾದ ಗಂಗು, ಅಸಮಾಧಾನ ಹೊರಹಾಕಿದರು, ಆರೀಫ್ ಅವರಿಗೆ ಫೋನ್ ಮಾಡಿ ಹೇಳಿದ್ದರೆ ಮರುದಿನ ಕಸವನ್ನು ಅವರು ತೆಗೆದುಕೊಂಡು ಹೋಗುತ್ತಿದ್ದರು ಈ ರೀತಿ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.





