March 21, 2026

ವಿಮಾನದ ಶೌಚಾಲಯದಲ್ಲಿ ಸಿಗರೇಟು ಸೇವನೆ: ಸುರಕ್ಷತೆ ಉಲ್ಲಂಘಿಸಿದ ವ್ಯಕ್ತಿ ವಿರುದ್ಧ ದೂರು ದಾಖಲು

0
indigo.jpg

ಮಂಗಳೂರು: ವಿಮಾನದ ಶೌಚಾಲಯದಲ್ಲಿ ಸಿಗರೇಟು ಸೇದಿ ವಿಮಾನದ ಸುರಕ್ಷತೆ ಉಲ್ಲಂಘಿಸಿದ ಕುರಿತು ವ್ಯಕ್ತಿಯೋರ್ವನ ವಿರುದ್ಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿಯನ್ನು ಕಾಸರಗೋಡು, ಮಂಜೇಶ್ವರ ನಿವಾಸಿ ಮುಶದೀಕ್ ಹುಸೈನ್ (24) ಎಂದು ತಿಳಿದು ಬಂದಿದೆ. ಈತ ಶನಿವಾರ ಸಂಜೆ ಅಬುದಾಬಿಯಿಂದ ಮಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದ ಇಂಡಿಗೋ ವಿಮಾನದಲ್ಲಿ ಸಿಗರೇಟು ಸೇದಿದ್ದಾನೆ ಎನ್ನಲಾಗಿದೆ.

ವಿಮಾನ ಮಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುವ ಕೆಲವೇ ಸಮಯಕ್ಕೆ ಮುನ್ನ ಆರೋಪಿಯು ವಿಮಾನದ ಶೌಚಾಲಯದಲ್ಲಿ ಸಿಗರೇಟು ಸೇದಿ ವಿಮಾನದ ಸುರಕ್ಷತಾ ನಿಯಮ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಿ ಇಂಡಿಗೋ ವಿಮಾನದ ಅಧಿಕಾರಿಗಳು ಬಜ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದೂರು ಆಧರಿಸಿ ಆರೋಪಿಗೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!