March 21, 2026

ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆ: ಅಧ್ಯಕ್ಷರಾಗಿ ಕರುಣಾಕರ ನಾಯ್ತೋಟ್ಟು, ಉಪಾಧ್ಯಕ್ಷರಾಗಿ ಸಂಗೀತ ಜಗದೀಶ ಪಾಣೆಮಜಲು ಅಯ್ಕೆ

0
IMG-20240902-WA0002.jpg

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ ಪ್ರಥಮ ಅವಧಿಗೆ ಅಧ್ಯಕ್ಷರಾಗಿ ಕರುಣಾಕರ ನಾಯ್ತೋಟ್ಟು, ಉಪಾಧ್ಯಕ್ಷರಾಗಿ ಸಂಗೀತ ಜಗದೀಶ ಪಾಣೆಮಜಲು ಅವರು ಆಯ್ಕೆಯಾಗಿದ್ದಾರೆ.

ವಿಟ್ಲ ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದು 2 ವರ್ಷ 8 ತಿಂಗಳು ತುಂಬಿದೆ. ಒಟ್ಟು 18 ವಾರ್ಡ್ ಗಳಲ್ಲಿ ಬಿಜೆಪಿ ಬೆಂಬಲಿತರು 12, ಕಾಂಗ್ರೆಸ್ ಬೆಂಬಲಿತರು 5 ಮತ್ತು ಎಸ್ ಡಿಪಿ ಐ ಬೆಂಬಲಿತರು 1 ಚುನಾಯಿತರಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗಾ ಬಿ ಮತ್ತು
ಉಪಾಧ್ಯಕ್ಷ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾತಿ ಪ್ರಕಟಗೊಂಡಿತ್ತು. ಅದರಂತೆ ಬಿಜೆಪಿ ಯಿಂದ ಅಧ್ಯಕ್ಷ ಸ್ಥಾನಕ್ಕೆ ಕರುಣಾಕರ, ಉಪಾಧ್ಯಕ್ಷ ಸ್ಥಾನಕ್ಕೆ ಸಂಗೀತ ಪಾಣೆಮಜಲು ಅವರು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳು ಇಲ್ಲದ ಕಾರಣಕ್ಕೆ ನಾಮಪತ್ರ ಸಲ್ಲಿಸಿರಲಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಪದ್ಮಿನಿ ಅವರು ನಾಮಪತ್ರ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!