ಮೊಬೈಲ್‌ನಲ್ಲಿ ಮಾತಾಡುತ್ತ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಬಿತ್ತು 5,000 ಸಾವಿರ ರೂ. ದಂಡ
ಬಸ್ ಚಲಾಯಿಸುತ್ತಿದ್ದ ವೇಳೆ ಮೊಬೈಲ್ ಬಳಸುತ್ತಿದ್ದ ಚಾಲಕನಿಗೆ ಪ್ರಯಾಣಿಕರೋರ್ವರ ದೂರಿನ ಮೇರೆಗೆ ಟ್ರಾಫಿಕ್ ಪೊಲೀಸರು ಐದು ಸಾವಿರ ದಂಡ ವಿಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ- ತೀರ್ಥಹಳ್ಳಿ- ಉಡುಪಿ- ಮಂಗಳೂರಿಗೆ ದಿನ ನಿತ್ಯ ತೆರಳುವ ನವದುರ್ಗಾ ಪ್ರಸಾದ್(ಕೆ ಎ 18
ಸಿ 4794 ನಂಬರ್) ಖಾಸಗಿ ಬಸ್‌ನ ಚಾಲಕ ರಾಜೇಶ್ ಎಂಬುವವರು, ಪ್ರತಿನಿತ್ಯ ಪ್ರಯಾಣಿಕರನ್ನು ಕರೆದುಕೊಂಡು ತೆರಳುವಾಗ ಮೊಬೈಲ್ ಬಳಕೆ ಮಾಡುತ್ತಿದ್ದರು. ಅಲ್ಲದೇ, ತೀಕ್ಷ್ಣ ತಿರುವು ಇರುವ ರಸ್ತೆಯಲ್ಲಿ ಸಹ ಪ್ರಯಾಣಿಕರು ರಕ್ಷಣೆ ಸುರಕ್ಷತೆ ಲೆಕ್ಕಿಸದೆ ಮೊಬೈಲ್ ಬಳಸುತ್ತಿದ್ದರು.
ಮೊಬೈಲ್‌ನಲ್ಲಿ ಮಾತಾಡುತ್ತ ವಾಹನ ಚಲಾಯಿಸುತ್ತಿದ್ದನ್ನು ಗಮನಿಸಿದ ಪ್ರಯಾಣಿಕರೋರ್ವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದರು. ಬಳಿಕ ಈ ವಿಡಿಯೋವನ್ನು ಶಿವಮೊಗ್ಗ ಟ್ರಾಫಿಕ್ ಪೊಲೀಸರಿಗೆ ಕಳುಹಿಸಿ, ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.




