February 2, 2026

ಉಡುಪಿ: ವಿದ್ಯಾರ್ಥಿನಿ ದಿಢೀರ್ ಅಸ್ವಸ್ಥ: ಬಸ್ಸನ್ನೇ ಕೊಂಡೊಯ್ದ ಚಾಲಕ ನಸೀಫ್

0
image_editor_output_image-2039356730-1724306526236.jpg

ಉಡುಪಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ದಿಢೀರ್ ಅಸ್ವಸ್ಥಗೊಂಡ ಪರಿಣಾಮ ಖಾಸಗಿ ಬಸ್ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಘಟನೆ ಗುರುವಾರ (ಆಗಸ್ಟ್ 22) ಉಡುಪಿಯಲ್ಲಿ ನಡೆದಿದೆ.

ಎಂದಿನಂತೆ ಮಂಗಳೂರಿನಿಂದ ಮಣಿಪಾಲಕ್ಕೆ ಹೊರಟಿದ್ದ ಎಕೆಎಂ ಎಸ್ (AKMS) ಬಸ್ಸಿಗೆ ಮೂಲ್ಕಿಯಲ್ಲಿ ವಿದ್ಯಾರ್ಥಿನಿಯೋರ್ವಳು ಉಡುಪಿಗೆ ತೆರಳಲು ಹತ್ತಿದ್ದಾಳೆ ಆದರೆ ಕಟಪಾಡಿ ದಾಟಿ ಉದ್ಯಾವರ ಸಮೀಪಿಸುತ್ತಿದ್ದಂತೆ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಾಳೆ ಕೂಡಲೇ ಬಸ್ಸಿನ ಚಾಲಕ ನಸೀಫ್, ಹಾಗೂ ನಿರ್ವಾಹಕ ಮೋಹಿತ್ ಕೂಡಲೇ ಬಸ್ಸನ್ನು ಉಡುಪಿಯ ಟಿ.ಎಂ.ಎ . ಪೈ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಬಳಿಕ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!