February 1, 2026

ಮಾಣಿಲ ಶ್ರೀಧಾಮದಲ್ಲಿ ವರಮಹಾಲಕ್ಷ್ಮೀ ವ್ರತಾಚರಣೆ ಸಮಾರೋಪ: ವರಮಹಾಲಕ್ಷ್ಮೀಯ ಆರಾಧನೆಯಿಂದ ಸಹಸ್ರಾರು ಭಕ್ತರಿಗೆ ನೆಮ್ಮದಿ: ಮಾಣಿಲ ಶ್ರೀ

0
IMG-20240818-WA0003.jpg

ವಿಟ್ಲ: ಶ್ರದ್ಧೆ ಮತ್ತು ನಿಷ್ಠೆಯ ಅರಾಧನೆಯಿಂದ ಕ್ಲೇಶ ದೂರವಾಗಿ ಮನೋಬಲ ವೃದ್ಧಿಸುತ್ತದೆ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಭಾನುವಾರ ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವ ಸಮಾರೋಪ ಸಮಾರಂಭದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಕಳೆದ ೨೫ ವರ್ಷಗಳಲ್ಲಿ ೪೮ ದಿನಗಳ ಕಾಲ ಮಾಣಿಲ ಶ್ರೀಧಾಮದಲ್ಲಿ ವರಮಹಾಲಕ್ಷ್ಮೀಯ ಆರಾಧನೆಯಿಂದ ಸಹಸ್ರಾರು ಭಕ್ತರು ನೆಮ್ಮದಿಯನ್ನು ಕಂಡುಕೊಂಡಿದ್ದಾರೆ ಎಂದರು.

ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾಧ್ವೀ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿ ೨೫ ವರ್ಷಗಳಿಂದ ಮಾಣಿಲ ಕ್ಷೇತ್ರದಲ್ಲಿ ಸ್ವಾಮೀಜಿ ಅವರು ಮಾಡಿದ ಸೇವೆ ಸಾಧನೆ ಗಮನಾರ್ಹ, ಜನಜಾಗೃತಿ ಧರ್ಮ ಜಾಗೃತಿ ಮೂಲಕ ಸಮಾಜವನ್ನು ಒಗ್ಗೂಡಿಸಲು ನಿರಂತರ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ, ಈ ಪರಿಸರದಲ್ಲಿ ಒಡಿಯೂರು ಮತ್ತು ಮಾಣಿಲ ಅವಳಿ ಕ್ಷೇತ್ರಗಳಿದ್ದಂತೆ. ಇಬ್ಬರು ಶ್ರೀಗಳು ಊರಿನ ಮತ್ತು ಹಿಂದೂ ಸಮಾಜದ ಏಳಿಗೆ ದುಡಿಯುತ್ತಾ ಎಲ್ಲರಿಗೂ ಪ್ರೇರಣೆ ಆಗಿದ್ದಾರೆ ಎಂದು ಹೇಳಿದರು.

ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಬಾಗೀರಥಿ ಮುರುಳ್ಯ, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಡಾ ಮೋಹನ ಆಳ್ವ ಅವರನ್ನು ಸನ್ಮಾನಿಸಲಾಯಿತು.
ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಕೊಲ್ಲೂರಿನ ಮಧುಸೂದನ್ ಅಯ್ಯರ್, ಉದ್ಯಮಿ ಮುಂಬಯಿ ಬಾಲಕೃಷ್ಣ ರೈ, ಭುಜಬಲಿ ಧರ್ಮಸ್ಥಳ, ಜಿತೇಂದ್ರ ಕೊಟ್ಡಾರಿ, ಮಂಜುನಾಥ ಭಂಡಾರಿ ಉದ್ಯಮಿ ದಿವಾಕರ ಮೂಲ್ಯ ಲೋಕೇಶ್ ಕುಲಾಲ್, ಭಾಸ್ಕರ್ ರೈ ಪುಣೆ, ಬೆಳ್ಳಿ ಹಬ್ಬ ಸ್ವಾಗತ ಸಮಿತಿಯ ಅಧ್ಯಕ್ಷ ಕಲ್ಲೆಕ್ಕಾರುಗುತ್ತು ಮೋಹನ ಭಂಡಾರಿ, ಕಾರ್ಯಾಧ್ಯಕ ಸರಪಾಡಿ ಅಶೋಕ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್, ರಂಗೋಲಿ ಚಂದ್ರಹಾಸ ಶೆಟ್ಟಿ, ಟ್ರಸ್ಟಿ ವಾಸುದೇವ ಶೆಟ್ಟಿ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಮೇಶ್, ಮಾಣಿಲ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಮಾಣಿಲ ಶ್ರೀಧಾಮ ಮಹಾಲಕ್ಷ್ಮೀ ಮಹಿಳಾ ಸಮಿತಿಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಗೌರವಾಧ್ಯಕ್ಷೆ ರೇವತಿ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು.

ಒಡಿಯೂರು ವಜ್ರಮಾತಾ ಮಹಿಳಾ ವಿಕಾಸಕೇಂದ್ರದ ವತಿಯಿಂದ ಮಾಣಿಲಶ್ರೀಗಳನ್ನು ಗೌರವಿಸಲಾಯಿತು. ಸ್ವಾಮೀಜಿಯವರು ಕಲಿತ ಪಂಜಿಕಲ್ಲು ಬುಡೋಳಿ ಶಾಲೆಯ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು. ಸಮಾರಂಭ ಯಶಸ್ಸಿಗೆ ದುಡಿದ ಸ್ವಾಗತ ಸಮಿತಿ ಪದಾಧಿಕಾರಿಗಳನ್ನು, ಟ್ರಸ್ಟಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಟ್ರಸ್ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಟ್ರಸ್ಟಿ ಚಂದರಶೇಖರ ಮೂಲ್ಯ ವಂದಿಸಿದರು.
ರಂಗಕರ್ಮಿ, ಸಂಘಟಕ ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಪೂರ್ವಾಹ್ನ ದೇವಿ ಸನ್ನಿಧಿಯಲ್ಲಿ ಪ್ರಾರ್ಥನೆ ನಾಗಾರಾಧನೆ,
ಗಷಪತಿ ಯಾಗ, ದುರ್ಗಾಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಅಪರಾಹ್ನ ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯ ಕಾರ್ಯಕ್ರಮಗಳು ಜರಗಿದವು.
,

Leave a Reply

Your email address will not be published. Required fields are marked *

error: Content is protected !!